
ಜೂನ್.7 ರಂದು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ದಾನಿಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಕೊಡುಗೆ ಕಾರ್ಯಕ್ರಮ ನಡೆಯಿತು.

ಪ್ರೌಢ ಶಾಲಾ SDMC ಅಧ್ಯಕ್ಷ ರಾದ ನರಂಗ ಕುಲಾಲ್ ಇವರ ಅಧ್ಯಕ್ಷತೆ ಯಲ್ಲಿ ನೆಡೆದ ಈ ಕಾರ್ಯಕ್ರಮ ದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೊಡುಗೈ ದಾನಿಗಳಾದ ಶ್ರೀಯುತ ರಮೇಶ್ ಶೆಟ್ಟಿ ಮಂಜೊಲುಗುತ್ತು ಇವರು ತಮ್ಮ ತಂದೆ ತಾಯಿ ರಾಜು ಸುಂದರಿ ಶೆಟ್ಟಿಯವರ ಹೆಸರಿನಲ್ಲಿ ಸುಮಾರು ಐವತ್ತು ಸಾವಿರ ಹಣದಲ್ಲಿ ಅಂಗನವಾಡಿ ಯ ಮಕ್ಕಳಿಗೆ ಆಟದ ಸಾಮಗ್ರಿಗಳು ಹಾಗೂ1ರಿಂದ 10ನೇ ತರಗತಿಯ ಮಕ್ಕಳಿಗೆ ಇಡೀ ವರ್ಷಕ್ಕೆ ಆಗುವಷ್ಟು ಒಳ್ಳೆಯ ಗುಣಮಟ್ಟದ ನೋಟ್ ಬುಕ್ ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿನಿವೃತ್ತ ರಾದ ಎರ್ಲಪಾಡಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಅಂಬಿಕಾ ಮೇಡಂ ಇವರಿಗೆ ಶಾಲಾ ಮುಖ್ಯ ಶಿಕ್ಷಕರು ಹಾಗೂ SDMC ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಶಾಲಾ sdmc ಅಧ್ಯಕ್ಷರಾದ ಶ್ರೀ ನರಂಗ ಕುಲಾಲ್,ನಿಕಟ ಪೂರ್ವ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ, ಶಾಲಾಭಿವೃದ್ದಿ ಸಮಿತಿಯ ಶಿಕ್ಷಣ ತಜ್ಞರಾದ ಜಯರಾಮ ಶೆಟ್ಟಿ,ಪಂಚಾಯತ್ ಸದಸ್ಯ ರಾದ ಹರೀಶ್ ದೇವಾಡಿಗ, ದಾನಿಗಳು,sdmc ಸದಸ್ಯರು ಆದ ಕೆ.ಅನಂತ ಪಟ್ಟಾಭಿರಾವ್, ಸ್ಥಳ ದಾನಿಗಳಾದ ವಿದ್ಯಾನಂದ ಮುದ್ಯರು ಮುಖ್ಯ ಶಿಕ್ಷಕಿ ಸುನಂದಾ ಎಲ್.ಎಸ್. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಅಂಗನವಾಡಿ ಶಿಕ್ಷಕಿ ವಿಶ್ಮಿತಾ ಉಭಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುನಂದಾ ಎಲ್ ಎಸ್ ಎಲ್ಲರನ್ನೂ ಸ್ವಾಗತಿಸಿದರು.ಶಿಕ್ಷಕಿ ಜ್ಯೋತಿ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀ ಸುರೇಶ್ ಕುಮಾರ್ ಎಲ್ಲರಿಗೆ ಧನ್ಯವಾದ ನೀಡಿದರು.