ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

ಕಾರ್ಕಳ : ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ಎರ್ಲಪಾಡಿ ಇಲ್ಲಿ 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ವನ್ನು ಮಕ್ಕಳಿಗೆ ಬಲೂನು ,ಪೆನ್ನು,ಪೆನ್ಸಿಲ್ ನೀಡಿ ಸ್ವಾಗತ ಮಾಡಲಾಯಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉಭಯ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾದ ನರಂಗ ಕುಲಾಲ್,ಶ್ರೀ ದಿನೇಶ್ ಪೂಜಾರಿ ಹಾಗೂ ಸರ್ವಸದಸ್ಯರು ಮತ್ತು ಅತಿಥಿ ಗಳು ಉದ್ಘಾಟಿಸಿದರು. ಶಾಲೆಯ ಎಲ್ಲಾ ಮಕ್ಕಳಿಗೆ ಸರ್ಕಾರದ ಉಚಿತ ಪಠ್ಯಪುಸ್ತಕ ವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರು ವಿತರಿಸಿದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಈ ವರ್ಷ 100 ಶೇಕಡಾ ಫಲಿತಾಂಶ ತಂದುಕೊಟ್ಟ ಶಾಲೆ ಯ ಹೆಮ್ಮೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನೆಡೆಯಿತು. ಮುಖ್ಯ ಅತಿಥಿಗಳಾಗಿ ಕಾರ್ಕಳದ ಮಹಾದಾನಿಗಳಾದ ಶ್ರೀ ಕಮಲಾಕ್ಷ ಕಾಮತ್ ಶಾಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ರಾಮಾಯಣ ಸಿರಿ ಪುಸ್ತಕ ನೀಡಿ ಶುಭ ಹಾರೈಸಿದರು. ಎಸ್ ಡಿ ಎಂ ಸಿ ಯ ಸಕ್ರಿಯ ಸದಸ್ಯರೂ ನಿವೃತ್ತ ಮುಖ್ಯ ಶಿಕ್ಷಕರೂ ಆದ ಕೆ.ಅನಂತ ಪಟ್ಟಾಭಿ ರಾವ್ ಹಾಗೂ ಅವರ ಪತ್ನಿ ಎರ್ಲಪಾಡಿ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಪ್ರಸನ್ನ ಕುಮಾರಿ ಇವರು ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ಕಾಪು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೇ ಅವರು ನೀಡಿದ ಕನ್ನಡಾಂಬೆಯ ಶಾಲುಗಳನ್ನು ಅತಿಥಿ ಗಳು ಮಕ್ಕಳಿಗೆ ಹೊದಿಸಿ ಸನ್ಮಾನಿಸಿದರು.ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ವಿವಿಧ ಬಹುಮಾನ ನೀಡಿ ಶುಭ ಹಾರೈಸಿದರು. ಎನ್ ಎಂ ಎಂ ಸಿ ವಿದ್ಯಾರ್ಥಿ ವೇತನಕ್ಕೆ ನಮ್ಮ ಶಾಲೆಯಿಂದ ಆಯ್ಕೆಯಾದ ಹೆಮ್ಮೆಯ ವಿದ್ಯಾರ್ಥಿ ಕು.ಸೂರಜ್ ಗೆ ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಸನ್ಮಾನಿಸಿದರು. ಉಭಯ ಶಾಲಾಭಿವೃದ್ಧಿ ಸಮಿತಿ,ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸೇರಿ ಈ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಎಲ್ .ಎಸ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಹೇಮಲತಾ ಎಲ್ಲರಿಗೂ ಧನ್ಯವಾದ ನೀಡಿದರು .ಶಿಕ್ಷಕಿ ಜ್ಯೋತಿ ನಿರೂಪಿಸಿದರು ಹಾಗೂ ಶಿಕ್ಷಕಿಯರಾದ ಇಂದಿರಾ ಹಾಗೂ ಚೇತನಾ ಬಹುಮಾನ ವಿತರಣೆ ಪಟ್ಟಿ ವಾಚಿಸಿದರು. ಉಭಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾದ ನರಂಗ ಕುಲಾಲ್, ದಿನೇಶ್ ಪೂಜಾರಿ,ಪಂಚಾಯತ್ ಸದಸ್ಯ ರಾದ ಶ್ರೀ ಹರೀಶ್ ದೇವಾಡಿಗ,ದಾನಿಗಳಾದ ಕೆ.ಕಮಲಾಕ್ಷ ಕಾಮತ್, ರಮೇಶ್ ಶೆಟ್ಟಿ ಮಂಜೊಲು ಗುತ್ತು, ಅನಂತ ಪಟ್ಟಾಭಿ ರಾವ್ ದಂಪತಿಗಳು ,ಡಾ. ಅರುಂಧತಿ ನಾಯಕ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಕುಮಾರ್ ಉಭಯ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿವೃಂದದವರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ದ ನಂತರ ದಾನಿಗಳಾದ ಕೆ.ಕಮಲಾಕ್ಷ ಕಾಮತ್ ಇವರಿಂದ ಎಲ್ಲರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.