“ತಾಯಿಯ ಗೌರವಕ್ಕಾಗಿ ಇಂತಹ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ಸಿದ್ಧ” ಕುಲ್ವಿಂದರ್ ಕೌರ್ ಪೋಸ್ಟ್

ಚಂಡಿಗಡ್: ನೂತನ ಸಂಸದೆಯಾಗಿ ಆಯ್ಕೆಗೊಂಡ ನಟಿ ಕಂಗಣ ರಾಣಾವತ್ ಗೆ ವಿಮಾನ ನಿಲ್ದಾಣದಲ್ಲಿ ತೆರಳುವ ಸಮಯ, ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ ನಟಿಗೆ ಕಪಾಳ ಮೋಕ್ಷ ಮಾಡಿದ್ದು, ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ಅಮಾನತುಗೊಳಿಸಿ ಬಂಧಿಸಲಾಗಿದೆ.
ಈ ವಿಚಾರವಾಗಿ, ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ , ನನ್ನ ತಾಯಿಯ ಗೌರವಕ್ಕಾಗಿ ಇಂತಹ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ. ನನಗೆ ಈ ಕೆಲಸವನ್ನು ಕಳೆದುಕೊಳ್ಳಲು ಭಯವಿಲ್ಲ ಎಂದು ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.