
ಕಾರ್ಕಳ: ದಿನಾಂಕ 12/06/2026 ರಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಶಾಲಾ ಸಂಸತ್ತಿನ ಚುನಾವಣೆಯನ್ನು ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್ ಕಾಮತ್ ಉದ್ಘಾಟಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ ಹಾಗೂ ಉತ್ತಮ ನಾಯಕತ್ವದ ಗುಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಮತದಾನದ ಪ್ರಕ್ರಿಯೆಯನ್ನು ಶಿಸ್ತಿನಿಂದ ನಡೆಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ, ಜವಾಬ್ದಾರಿಯುತ ನಾಗರಿಕರ ಕರ್ತವ್ಯವನ್ನು ಅರಿತುಕೊಂಡರು. ಮತ ಎಣಿಕೆಯ ನಂತರ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಹತ್ತನೇ ತರಗತಿ ಶಾಲಾ ನಾಯಕನಾಗಿ ತೇಜಸ್ ವಿ.ಶೇರಿಗಾರ್ , ನಾಯಕಿಯಾಗಿ ಸುಜನ್ಯ ಕುಲಾಲ್, ಶಿಸ್ತು ವಿಭಾಗದ ನಾಯಕನಾಗಿ ಸಮರ್ಥ್ ಬಿ .ಆಳ್ವ,ಆಹಾರ ವಿಭಾಗದ ನಾಯಕನಾಗಿ ಸಮರ್ಥ್ ಎಸ್. ಕೆ, ಸಾಂಸ್ಕೃತಿಕ ವಿಭಾಗದ ನಾಯಕನಾಗಿ ತನೀಶ್ ಆರ್,ಕ್ರೀಡಾ ನಾಯಕನಾಗಿ ಪವನ್ ಕಾಮತ್ , ವಿರೋಧ ಪಕ್ಷದ ನಾಯಕರಾಗಿ ಅನ್ಶಿ ಎಸ್.ಅಂಚನ್ ಹಾಗೂ ಶ್ರೀಶಾನ್ಯ ಪೂಜಾರಿ ಆಯ್ಕೆಯಾದರು. ಚುನಾವಣೆಯ ಫಲಿತಾಂಶವನ್ನು ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ. ಪ್ರಶಾಂತ್ ಹೆಗ್ಡೆಯವರು ಘೋಷಿಸಿದರು.
ಈ ಚುನಾವಣಾ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ನಾಯಕತ್ವ, ಜವಾಬ್ದಾರಿ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಮಹತ್ವವನ್ನು ಪ್ರಾಯೋಗಿಕವಾಗಿ ಕಲಿಯುವ ಅವಕಾಶವನ್ನು ಪಡೆದರು. ಕಾರ್ಯಕ್ರಮವು ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

































