
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ , ಜನವರಿ 1 ರಂದು ವಸಂತ ಪಂಚಮಿ ಆಚರಿಸಲಾಯಿತು. ಶ್ರೀ ಪಂಚಮಿ ಮತ್ತು ಸರಸ್ವತಿ ಪಂಚಮಿ ಎಂದೂ ಕರೆಯಲ್ಪಡುವ ಹಿಂದೂ ಹಬ್ಬ ವಸಂತ ಪಂಚಮಿಯನ್ನು ವಸಂತ ಕಾಲದ ಮೊದಲ ದಿನದಂದು ಆಚರಿಸಲಾಗುತ್ತದೆ . ಈ ಹಬ್ಬದ ಹಿನ್ನೆಲೆ ಸಂಗೀತ ಮತ್ತು ಕಲೆಗಳ ಹಿಂದೂ ದೇವತೆಯಾದ ಸರಸ್ವತಿಯನ್ನು ಆರಾಧಿಸಲಾಗುತ್ತದೆ. ಲಲಿತ ಪಂಚಮಿ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಸರಸ್ವತಿ ಶ್ಲೋಕ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪ್ರಸಾದ ವಿತರಿಸಲಾಯಿತು.





















