
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಜ .30ರಂದು ಕುಟುಂಬ ಪ್ರಬೋಧನ್ ಕಾರ್ಯಕ್ರಮದ ಅಂಗವಾಗಿ ಭಾರತ್ ಪೂಜನಾ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮಕ್ಕೆ ಕುಟುಂಬ ಪ್ರಬಂಧನ್ ತಾಲೂಕು ಸಂಯೋಜಕರಾದ ಶ್ರೀಯುತ ಹರೀಶ್, ಉಡುಪಿ ಜಿಲ್ಲಾ ಸಹಪ್ರಚಾರಕರಾದ ಶ್ರೀಯುತ ಪೂರ್ಣೇಶ್, ತಾಲೂಕು ಕುಟುಂಬ ಸಹ ಸಂಯೋಜಕರಾದ ಶ್ರೀಯುತ ಉಮೇಶ್ ರವರು ಆಗಮಿಸಿದರು.ಭಾರತ ಮಾತೆಗೆ ಪುಷ್ಪಾರ್ಚನೆ ಬಳಿಕ ಮಾತನಾಡಿದ ಉಡುಪಿ ಜಿಲ್ಲಾ ಸಹಪ್ರಚಾರಕರಾದ ಪೂರ್ಣೇಶ್ ಅವರು ದೇಶದ ಕಲ್ಪನೆ, ಸಂಸ್ಕಾರ, ಸಂಸ್ಕೃತಿ ಕುರಿತು ಮಕ್ಕಳಿಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಿ “ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲು” ಎಂದು ನುಡಿದರು.ಕಾರ್ಯಕ್ರಮವನ್ನು ತಾಲೂಕು ಕುಟುಂಬ ಸಹ ಸಂಯೋಜಕರಾದ ಉಮೇಶ್ ರವರು ನಿರೂಪಿಸಿದರು. ಶಾಲಾ ಮಕ್ಕಳು ವಂದೇ ಮಾತರಂ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್.ಕಾಮತ್ ,ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















