ಹತ್ತನೆಯ ತರಗತಿಯ ಮಕ್ಕಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ವಿಷಯದ ಕುರಿತಾದ ವಿಚಾರಗೋಷ್ಠಿ

ಭವಿಷ್ಯದ ಭಾರತವನ್ನು ನಿರ್ಮಿಸಲು ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನಾವು ಅವರ ವಿದ್ಯಾರ್ಥಿ ಜೀವನದಲ್ಲಿ ಒದಗಿಸಿ ಅವರನ್ನು ಸಮರ್ಥರನ್ನಾಗಿಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಅವರು ಅಭಿಪ್ರಾಯ ಪಟ್ಟರು.

ಅವರು ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್, ಕಾರ್ಕಳ ಇಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ನಡೆದ ವೃತ್ತಿ ಮಾರ್ಗದರ್ಶನ ಎಂಬ ವಿಷಯದ ಕುರಿತಾದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮಕ್ಕಳಿಗೆ ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಗಾಗಿ ಓದಲು ಉತ್ತೇಜನವನ್ನು ನೀಡಿದ ಅವರು ಭವಿಷ್ಯದಲ್ಲಿ ಮಕ್ಕಳಿಗೆ ಉಪಯುಕ್ತವಾದ ಕೋರ್ಸ್ ಗಳ ಆಯ್ಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ತದನಂತರದಲ್ಲಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ ಅವರ ಎಲ್ಲಾ ಸಂಶಯಗಳಿಗೆ ಉತ್ತರವನ್ನು ನೀಡಿದರು. ಸಂಸ್ಥೆಯ ಆಡಳಿತ ಮಂಡಳಿ, ಶ್ರೀ ಭುವನೇಂದ್ರ ಕಾಲೇಜು ಟ್ರಸ್ಟ್ ಇದರ ಕಾರ್ಯದರ್ಶಿ, ಡಾ. ಮಂಜುನಾಥ್ ಕೋಟ್ಯಾನ್ ಸ್ವಾಗತಿಸಿದರು. ಸಂಸ್ಥೆಯ ಸಂಚಾಲಕರಾದ ಕೆ. ವೆಂಕಟೇಶ್ ಪ್ರಭು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸೃಜಲಿ ಶೆಟ್ಟಿ ನಿರೂಪಿಸಿ, ಪ್ರಾಂಶುಪಾಲೆ ಪ್ರಮೀಳಾ ಕೋಟ್ಯಾನ್ ವಂದಿಸಿದರು.





















