ಅವಧೂತ ಶ್ರೀ ವಿನಯ್ ಗುರೂಜಿಯವರಿಗೆ “ಧರ್ಮಯೋಗಿ ಸಮ್ಮಾನ್ ಪುರಸ್ಕಾರ”

ಶ್ರೀ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರ ಹಾಗೂ ಶ್ರೀ ನಂದಿಕೇಶ್ವರ ದೇವಸ್ಥಾನ-ಮುದ್ರಾಡಿ ಜುಲೈ 08 ಮಂಗಳವಾರ ಬೆಳಗ್ಗೆ 09 ಗಂಟೆಯಿಂದ ಧರ್ಮಯೋಗಿ ಮೋಹನ ಸ್ವಾಮೀಜಿಯವರ ಪುಣ್ಯ ಆರಾಧನಾ ಮಹೋತ್ಸವ ಶ್ರೀ ಕ್ಷೇತ್ರ ಮುದ್ರಾಡಿಯಲ್ಲಿ ಜರುಗಲಿದೆ.
ಪ್ರತಿ ವರ್ಷದಂತೆ ಶ್ರೀ ಕ್ಷೇತ್ರದಲ್ಲಿ ,ಪ್ರಸ್ತುತ ವರ್ಷದಲ್ಲೂ ಪರಮಪೂಜ್ಯ ಧರ್ಮಯೋಗಿ ಸಮ್ಮಾನ್ ಪ್ರಶಸ್ತಿಯನ್ನ ದೈವಿಕಲ್ಪ ಜ್ಞಾನಿಗಳಿಗೆ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿ ,ಸತ್ಕಾರ್ಯಕ್ಕೆ ,ಮನುಕುಲದ ಏಳಿಗೆಗೆ ಮಾದರಿಯಾದ ಪೂಜ್ಯ ಮಹಾನ್ ಮನುಜರನ್ನ ಗುರುತಿಸಿ ,ಪುರಸ್ಕರಿಸಿ ಗೌರವಿಸಲಾಗುತ್ತಿದೆ.
ದೇವರ ದೂತ ಅಥವಾ ಅವಧೂತ ಗುರೂಜಿ ಎಂದೇ ಕರೆಯಲ್ಪಡುವ ,ಪೂಜಿಸಲ್ಪಡುವ ,ಆಧ್ಯಾತ್ಮ ಸಾಕ್ಷಾತ್ಕಾರಕ ಪರಮಪೂಜ್ಯ ಗೌರಿಗದ್ದೆ ಆಶ್ರಮದ, ಅವಧೂತ ಶ್ರೀ ವಿನಯ್ ಗುರೂಜಿಯವರಿಗೆ ಈ ಸಾಲಿನ ಅಂದರೆ 2025ನೇ ಸಾಲಿನ ಧರ್ಮಯೋಗಿ ಸಮ್ಮಾನ್ ಪುರಸ್ಕಾರ ನೀಡಿ ಪೂಜ್ಯರಿಗೆ ತುಂಬು ಭಕ್ತಿಬಾವದೊಂದಿಗೆ ಸಮರ್ಪಿಸಿ ಗೌರವಿಸಲಾಗುವುದು.
ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ,ಲೋಕನಾಥ ಸಾಯಿಬಾಬಾ , ಬ್ರಹ್ಮಶ್ರೀ ನಾರಾಯಣ ಗುರುಗಳು, ದತ್ತಾತ್ರೇಯ ಸ್ವಾಮಿ ,ಧರ್ಮಯೋಗಿ ಮೋಹನ ಗುರೂಜಿ ಅವರಿಗೆ, ಗುರು ವಂದನೆಯ ವಿಶೇಷ ಸೇವಾರ್ಥ ಪೂಜೆ ನಡೆಯಲಿದೆ.
ಯೋಗಿವರ್ಯರ ಆರಾಧನಾ ಮಹೋತ್ಸವದ ಹಿನ್ನೆಲೆ ,108 ದಿವ್ಯಾಂಗ ಮಕ್ಕಳಿಗೆ ಹಾಗೂ ವೃದ್ಧರಿಗೆ ಅನ್ನಸಂತರ್ಪಣೆ ಸೇವೆಯನ್ನ ಹಮ್ಮಿಕೊಳ್ಳಲಾಗಿದೆ. ಯೋಗಿವರ್ಯ ಮೋಹನ ಸ್ವಾಮೀಜಿಯವರ ಆಜ್ಞೆಯಂತೆ ದಾನದ ಮೂಲಕ ಒದಗಿ ಬಂದ ಹಣ ವ್ಯಯಿಸಿ ,ಕ್ಷೇತ್ರದಲ್ಲಿ ತಾಯಿಯ ಸನ್ನಿಧಾನದಲ್ಲಿ ಭೋಜನ ತಯಾರಿಸಿ ,ತಾಯಿಗೆ ನೈವೇದ್ಯವಿಟ್ಟು ಬಳಿಕ ಅನ್ನಸಂತಪರ್ಣೆ ನೇರವೆರಿಸಲಾಗುತವುದು
ವರ್ಷಂಪ್ರತಿ ನಡೆದುಕೊಂಡು ಬಂದ ಪದ್ದತಿ ಹಾಗೂ ಶ್ರೀವರ್ಯರ ಆಜ್ಞೆಯಂತೆ ಕೊಡುಗೈ ದಾನಿಗಳು ತಮ್ಮ ಇಚ್ಚಾನುಸಾರ ,ತನು-ಮನ-ಧನದ ಸಂಕಲ್ಪದೊಂದಿಗೆ ದಿವ್ಯಾಂಗ ಮಕ್ಕಳಿಗೆ ಹಾಗೂ ಹಸಿದ ಹಿರಿ ಜೀವಗಳಿಗೆ ತುತ್ತು ಅನ್ನ ನೀಡುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೇವೆ ನೀಡಲು ಇಚ್ಚಿಸುವ ಮಹನೀಯರು ದೇವಸ್ಥಾನದ ಆಡಳಿತ ಮಂಡಳಿಯ ದೂರವಾಣಿ ಸಂಖ್ಯೆ ಕೆಳಗೆ ನೀಡಲಾಗಿದೆ
10 ಸಾವಿರ ರೂಪಾಯಿಗಳಿಕ್ಕಿಂತ ಹೆಚ್ಚು ಧನ ಸಹಾಯ ಮಾಡಿ- ಸೇವೆ ನೀಡುವ ದಾನಿಗಳ ಹೆಸರಲ್ಲಿ ಶ್ರೀವರ್ಯರಿಂದ ಗುರು ಪೂಜೆ ,ಹಾಗೂ ಶ್ರೀ ಕ್ಷೇತ್ರದ ಗಂಧ- ಪ್ರಸಾದ ಮತ್ತು ಶ್ರೀ ಗುರು ರಕ್ಷಾ ಚಕ್ರ ಯಂತ್ರವನ್ನ ಅವಧೂತ ವಿನಯ್ ಗುರೂಜಿ ಅವರಿಂದ ಆಶೀರ್ವದಿಸಿ ,ಧ್ಯಾನಿಸಿ -ಪುರೋಹಿತರು,
ಭಜನೆ ನೃತ್ಯ -ನಾದ ಮೇಳಗಳು ,ಮಂತ್ರಘೋಷಗಳು ಮೂಲಕ ಗುರು ವಂದನೆ ಪೂಜೆ,ಯಜ್ಞ-ಯಾಗಾದಿಗಳ, ಮೂಲಕ ,ಶ್ರೀ ಗುರು ಚಕ್ರ ಯಂತ್ರಗಳಲ್ಲಿ ಗುರುಬಲ ಶಕ್ತಿ ಪ್ರತಿಷ್ಠಾಪಿಸಿ ,ನಿಮ್ಮ ಮನೆಯ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿ ಕೊಡಲಾಗುವುದು, ಪೂಜಿಸಿದ ಶಕ್ತಿ ಐಕ್ಯಮಾಡಿದ ಯಂತ್ರಧಾರಣೆಯಿಂದ ಗುರುಬಲ ,ರಕ್ಷಣೆ ,ಅಭಯ ,ಭಯನಾಶಕ, ಹಾಗೂ ಕಾರ್ಯದಲ್ಲಿ ವೃದ್ಧಿ ,ಮಾನಸಿಕ-ಶರೀರ ಸ್ವಾಸ್ಥ್ಯ – ನೆಮ್ಮದಿ ಯಂತ್ರ ಧಾರಣೆ ಮಾಡುವುದರಿಂದ ಪ್ರಾಪ್ರಿಯಾಗಲಿದೆ..ಯಂತ್ರ ಧಾರಣೆ ನಿಯಮ ತಿಳಿಸಲಾಗುವುದು.
ಈ ಸೇವೆಗಳು ಮುಂಗಡವಾಗಿ ಕರೆಮಾಡಿ ಕಾಯ್ದಿರಿಸಿದವರಿಗೆ ಮಾತ್ರ ಅನ್ವಯವಾಗಲಿದೆತನು-ಮನ-ಧನ ನೀಡಿ ಸೇವೆಗೈಯುವ ಎಲ್ಲಾ ದಾನಿ ಮಹನೀಯರಿಗೆ ಕ್ಷೇತ್ರದಲ್ಲಿಯೇ ಗುರುಗಳ ಗಂಧ ಪ್ರಸಾದ ಹಾಗೂ ಗುರು ರಕ್ಷಾ ಯಂತ್ರ ವಿತರಿಸಲಾಗುವುದು..ಮುಂಗಡವಾಗಿ ಕರೆ ಮಾಡಿ ಹೆಸರು ನೊಂದಾಯಿಸಿಕೊಂಡವರಿಗೆ ಮಾತ್ರ ಅನ್ವಯವಾಗಲಿದೆ.
73532 31188/ 99800 51105
ಶ್ರೀ ವಿಜಯಕೀರ್ತಿ ಸುಕುಮಾರ್ ಮೋಹನ್,ಧರ್ಮಧಿಕಾರಿಗಳು – ಜೋತ್ಯಿಷ ಪಂಡಿತರು,ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರ ಮುದ್ರಾಡಿ ಹಾಗೂ ಶ್ರೀ ನಂದಿಕೇಶ್ವರ ದೇವಸ್ಥಾನ,ಮುದ್ರಾಡಿ-ನಾಟ್ಕದೂರು ,ಹೆಬ್ರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













