
ಕಾಸರಗೋಡು: ಶಬರಿಮಲೆಯಲ್ಲಿ ದಿನದಿಂದ ದಿನಕ್ಕೆ ಭಕ್ತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ನವೆಂಬರ್ 15ರಿಂದ ಡಿ.15ರ ಅವಧಿಯಲ್ಲಿ ಶಬರಿಮಲೆಗೆ 23,44,490 ಭಕ್ತರು ಭೇಟಿ ನೀಡಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 19,03,321 ಭಕ್ತರು ದರ್ಶನ ಪಡೆದಿದ್ದರು. ಭಕ್ತರು ವರ್ಚುವಲ್ ಸರತಿಯಲ್ಲಿ ನಿಗದಿತ ಸಮಯಕ್ಕೆ ಬದ್ಧರಾಗದೇ ಇರುವುದರಿಂದ ಜನಸಂದಣಿ ನಿರ್ವಹಿಸಲು ತೊಂದರೆಯಾಗುತ್ತಿದೆ.
- ಡಿ.25 ಮತ್ತು 26ರಂದು ಜನಸಂದಣಿ ಕಡಿಮೆ ಮಾಡಲು ವರ್ಚುವಲ್ ಕ್ಯೂಗೆ ಒತ್ತು ನೀಡಲಾಗಿದೆ.
- ಶಬರಿಮಲೆ ಯಾತ್ರೆಗೆ ಸಂಬಂಧಿ ಸಿ ಜಿಲ್ಲಾ ಪೊಲೀಸರು ಕ್ಯೂಆರ್ ಕೋಡ್ ರೂಪದಲ್ಲಿ ಶಬರಿಮಲ ಪೊಲೀಸ್ ಗೈಡ್ ಎಂಬ ಆನ್ ಲೈನ್ ಪೋರ್ಟಲ್ ಸಿದ್ಧಪಡಿಸಿದ್ದಾರೆ.
- ತೀರ್ಥ ಯಾತ್ರೆಯ ಪ್ರಮುಖ ಸ್ಥಳಗಳಲ್ಲಿ ಈ ಪೋರ್ಟಲ್‌ನ ಕ್ಯೂಆರ್ ಕೋಡ್ ಲಭ್ಯವಾಗುವಂತೆ ಮಾಡಲಾಗಿದೆ.
- ಹೆಚ್ಚುವರಿಯಾಗಿ, ಜಿಲ್ಲಾಡಳಿತವು ಚಾಟ್‌ಬಾಟ್ ಸೇವೆಯನ್ನು ಪ್ರಾರಂಭಿಸಿದ್ದು, 6238008000ಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಬಹುದು.
- ಇದು ಭಕ್ತರಿಗೆ ತುರ್ತು ವೈದ್ಯಕೀಯ ಸಹಾಯ, ದೇವಾಲಯದ ಪೂಜಾ ಸಮಯಗಳು, ಕೆಎಸ್‌ಆರ್‌ಟಿಸಿ ಬಸ್ ಗಳ ವೇಳಾಪಟ್ಟಿ ಮತ್ತು ಇತರ ಉಪಯುಕ್ತ ಮಾಹಿತಿಗಳನ್ನು ಒದಗಿಸಲಾಗಿದೆ.
ಭಕ್ತಾದಿಗಳು ಪಾಲಿಸಬೇಕಾದ ನಿಯಮಗಳು:
- ಬೆಟ್ಟ ಹತ್ತುವಾಗ 10 ನಿಮಿಷಗಳ ನಡಿಗೆ ಬಳಿಕ 5 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುವುದು.
- ಸನ್ನಿಧಾನ ತಲುಪಲು ಮರಕೂಟಂ, ಸಾರಂಕುತಿ, ನಡಪಂದಲ್ ಸಾಂಪ್ರದಾಯಿಕ ಮಾರ್ಗವನ್ನು ಬಳಸಿ, ಹದಿನೆಂಟು ಮೆಟ್ಟಿಲುಗಳಲ್ಲಿ ಸರತಿ ಸಾಲನ್ನು ಅನುಸರಿಸುವುದು.
- ಮಕ್ಕಳು, ವಯೋವೃದ್ಧರು ಮತ್ತು ವ್ರತಧಾರಿಗಳಾಗಿರುವ ಬಾಲಕಿಯರ ಕುತ್ತಿಗೆಗೆ ನೇತುಹಾಕಬೇಕಾದ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳೊಂದಿಗೆ ಗುರುತಿನ ಚೀಟಿಗಳು ಪಡೆಯುವುದು.
- ಪವಿತ್ರ ಮೆಟ್ಟಿಲುಗಳನ್ನು ಹತ್ತುವಾಗ ಮಂಡಿಯೂರಿ ಕುಳಿತುಕೊಳ್ಳಬಾರದು.
- ಹಿಂದಿರುಗಲು ನಡಪಂದಲ್ ಫ್ಲೈಓವರ್ ಹೊರತುಪಡಿಸಿ ಯಾವುದೇ ಮಾರ್ಗವನ್ನು ಬಳಸಬಾರದು.
- ಮೇಲಿನ ತಿರುಮಟ್ಟಂ ಅಥವಾ ತಂತ್ರಿನಾಡದಲ್ಲಿ ವಿಶ್ರಾಂತಿ ಪಡೆಯಬಾರದು.