
ಕಾರ್ಕಳ: ಇಂಟರ್ನ್ಯಾಷನಲ್ ಮಾರ್ಷಿಯಲ್ ಆರ್ಟ್ಸ್ ಸಂಸ್ಥೆ (ರಿ), ಕಾರ್ಕಳ ಡೋಜೋ ಇವರು ಆಯೋಜಿಸಿದ ಅಂತರ್ ಡೋಜೋ ಕರಾಟೆ ಚಾಂಪಿಯನ್ ಶಿಪ್ – 2025 ರಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿ ಕಟಾ ಹಾಗೂ ಕುಮಿಟ್ ವಿಭಾಗದಲ್ಲಿ 11ಚಿನ್ನದ ಪದಕ,4 ಬೆಳ್ಳಿ ಪದಕ, 14 ಕಂಚಿನ ಪದಕ ಗೆದ್ದಿರುತ್ತಾರೆ.
ಬಹುಮಾನ ಗಳಿಸಿದ ವಿದ್ಯಾರ್ಥಿಗಳಾದ ನ್ಯಾಕ್ಲಿನ್ ಲಿಯೋನ ಪಿರೇರ, ಭಾನ್ವಿ ಶೆಟ್ಟಿ, ಧನ್ವಿ ಶೆಟ್ಟಿ, ಹಂಶಿಕಾ ಎಸ್,ಓಜಸ್ವಿ ಗಣಪತಿ ಎಚ್, ಪ್ರಣಮ್ಯ ಬೋರ್ಕೆರೆ, ಸಮೃದ್ಧಿ ಆಚಾರ್ಯ, ಶನ್ವಿತಾ, ಶ್ರೀಶಾ ಭಟ್, ಸೋನಿತ್ ಎಸ್ ದೇವಾಡಿಗ, ಎಲಿಷಾ ಆಳ್ವ, ಸಲ್ಮಾನ್ ವುಲ್ ಫಾರಿಸ್, ಶ್ರೇಷ್ಠ, ಆದ್ಯ ಹೆಚ್ ನಾಯಕ್, ನಿಹಾಲ್ ಎಚ್, ಈತನ್ ಆಳ್ವ, ಹಿಮಾಂಸ್, ಸಾನ್ವಿತ್, ಶ್ರುತ ಜೈನ್. ಸ್ಪರ್ಧಾ ವಿಜೇತರನ್ನು ಅವರ ಅದ್ಭುತ ಸಾಧನೆಗೆ ಶಾಲಾ ಮುಖ್ಯಸ್ಥರಾದ ಶಶಿಕಲಾ ಕೆ ಹೆಗ್ಡೆ, ಕುಮಾರಯ್ಯ ಹೆಗ್ಡೆ ಹಾಗೂ ಶಾಲಾ ಆಡಳಿತ ಅಧಿಕಾರಿ ಕರ್ತವ್ಯ ಜೈನ್ ಹಾಗೂ ಕರಾಟೆ ತರಬೇತುದರರಾದ ರಾಮಚಂದ್ರ ಹಾಗೂ ಶಿಕ್ಷಕ ವೃಂದ ಅಭಿನಂದಿಸಿರುತ್ತಾರೆ.





















