
ಕಾರ್ಕಳ: ವರ್ಧಮಾನ ಪ್ರಾಥಮಿಕ ಶಾಲೆ ಸಾಣೂರು ಇಲ್ಲಿ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಕೆಎಂಎಫ್ ನ ನಿರ್ದೇಶಕರಾಗಿರುವ ಸಾಣೂರು ನರಸಿಂಹ ಕಾಮತ್ ರವರು ಆಗಮಿಸಿ ಗೋವನ್ನು ಪೂಜಿಸುವ ಹಾಗೂ ಹಾಲು ಕರೆಯುವ ಪ್ರಾತ್ಯಕ್ಷಿಕೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಹಾಲಿನ ಮಹತ್ವ, ಹಾಲಿನ ಉತ್ಪನ್ನಗಳು ಹಾಗೂ ಸಂಸ್ಕರಣೆಯ ಬಗ್ಗೆ ಸವಿವರವಾಗಿ ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅಬುಬಕ್ಕರ್ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಶ್ರೀಮತಿ ರೇವತಿ ಹಾಗೂ ಮಾಸ್ಟರ್ ಸೌರವ್ ಸಹಕರಿಸಿದರು. ಶಾಲಾ ಸಂಚಾಲಕಿ ಶ್ರೀಮತಿ ಶಶಿಕಲಾ ಕೆ ಹೆಗ್ಡೆ ಪ್ರಸ್ತಾವಿಕ ನುಡಿಗಳೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಚಾಲಕರಾದ ಕುಮಾರಯ್ಯ ಹೆಗ್ಡೆ, ಆಡಳಿತಾಧಿಕಾರಿಯಾದ ಶ್ರೀಮತಿ ಕರ್ತವ್ಯ ಜೈನ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಹಾಲನ್ನು ವಿತರಿಸಿ ಹಾಲಿನ ಮಹತ್ವವನ್ನು ತಿಳಿಸಲಾಯಿತು. ಶಾಲಾ ಶಿಕ್ಷಕಿಯಾದ ಶ್ರೀಮತಿ ವಾಣಿ ಕಾರ್ಯಕ್ರಮವನ್ನು ನಿರೂಪಿಸಿದರು.
