
ವರ್ಧಮಾನ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗ್ರಾಮ ಪಂಚಾಯತ್‌ಗೆ ಶಿಕ್ಷಣಾತ್ಮಕ ಭೇಟಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಮಧು ಎಂ. ಸಿ. ಅವರು ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್‌ನ ಕಾರ್ಯ, ಕರ್ತವ್ಯ ಮತ್ತು ಹೊಣೆಗಾರಿಕೆಗಳ ಕುರಿತು ವಿವರವಾಗಿ ತಿಳಿಸಿದರು. ಗ್ರಾಮೀಣ ಅಭಿವೃದ್ಧಿ, ಮೂಲಸೌಕರ್ಯ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳು ಬಗ್ಗೆ ವಿದ್ಯಾರ್ಥಿಗಳು ಸಮಗ್ರ ಜ್ಞಾನ ಪಡೆದರು. ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮ್ಮ ಕುತೂಹಲಕ್ಕೆ ಉತ್ತರಗಳನ್ನು ಪಡೆದರು.
ವಿದ್ಯಾರ್ಥಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ತಮ್ಮ ಕೈಯಿಂದ ತಯಾರಿಸಿದ ಹೂವುಗಳನ್ನು ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ಮತ್ತು ಸ್ಕೌಟ್ ಮಾಸ್ಟರ್ ಕರ್ತವ್ಯ ಜೈನ್, ಗೈಡ್ ಕ್ಯಾಪ್ಟನ್ ಪ್ರಿಯಾ ನಾಯಕ್ ಶಿಕ್ಷಕಿ ಸ್ಮಿತಾ ಹಾಗೂ ದೈಹಿಕ ಶಿಕ್ಷಕರಾದ ಸುಮಿತ್ ಉಪಸ್ಥಿತರಿದ್ದರು.
ಈ ಶಿಕ್ಷಣಾತ್ಮಕ ಭೇಟಿ ವಿದ್ಯಾರ್ಥಿಗಳಲ್ಲಿ ನಾಗರಿಕ ಜಾಗೃತಿ ಮತ್ತು ಜವಾಬ್ದಾರಿತ್ತ್ವ ಭಾವನೆ ಬೆಳೆಸಲು ಮಹತ್ವದ ಪಾತ್ರ ವಹಿಸಿತು.





















