ನೂತನ ಅಧ್ಯಕ್ಷರಾಗಿ ರೊ.ಇಕ್ಬಾಲ್ ಅಹಮದ್ ಮತ್ತು ಕಾರ್ಯದರ್ಶಿಯಾಗಿ ರೊ.ಗಣೇಶ್ ಸಾಲಿಯನ್ ಅಧಿಕಾರ ಸ್ವೀಕಾರ

ರೋಟರಿ ಸಂಸ್ಥೆ ಕಾರ್ಕಳ ಇದರ ಪದಗ್ರಹಣ ಕಾರ್ಯಕ್ರಮ ಪ್ರಕಾಶ್ ಹೋಟೆಲಿನ ಉತ್ಸವ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ರೊ| ಇಕ್ಬಾಲ್ ಅಹಮದ್ ಹಾಗೂ ನೂತನ ಕಾರ್ಯದರ್ಶಿಯಾಗಿ ರೊ| ಗಣೇಶ್ ಸಾಲಿಯಾನ್ ಅಧಿಕಾರವನ್ನು ಸ್ವೀಕರಿಸಿದರು.

ಪದಪ್ರಧಾನ ಅಧಿಕಾರಿಯಾಗಿ ರೋಟರಿ ಜಿಲ್ಲೆ 3180 ಮಾಜಿ ರೋಟರಿ ಗವರ್ನರ್ ಡಾ ದೇವದಾಸ್ ರೈ ಮಾತನಾಡುತ್ತಾ ರೋಟರಿ ಸಂಸ್ಥೆ ಕಾರ್ಕಳ ಅಂತರಾಷ್ಟ್ರೀಯ ರೋಟರಿಯ ಜೊತೆಗೆ ಸೇರಿ 15 ಗ್ಲೋಬಲ್ ಗ್ರ್ಯಾಂಟ್ ಯೋಜನೆ ಮಾಡಿದ್ದು ನಿಜವಾಗಿಯೂ ಅನುಕರಣೆಯ ಹಾಗೂ ಹೆಮ್ಮೆಯ ವಿಷಯ ಎಂದು ಪ್ರದ ಪ್ರಧಾನ ಮಾಡಿ ಹೇಳಿದರು.
ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಶ್ರೀ ಜಬ್ಬರ್ ಸಮೊ ಅವರಿಗೆ ರೋಟರಿಯ ಪಿ ಎಚ್ ಎಫ್ ಪದವಿಯನ್ನು ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲು ವಿದ್ಯಾರ್ಥಿವೇತನವನ್ನು ನೀಡಲಾಯಿತು, ಕಲ್ಯಾ ಮಲ್ಲಯಬೆಟ್ಟು ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು. ಸಾಣೂರು ಮುದ್ದಣ್ಣ ನಗರ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಫಲಾನುಭಾವಿ ಮಹಿಳೆಗೆ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು. ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜೋಡುಕಟ್ಟೆ ಕಲ್ಲಗುಪ್ಪೆ ಶಾಲೆಗೆ ತಲಾ 45 ಸಾವಿರ ವೆಚ್ಚದ ಕುಡಿಯುವ ಶುದ್ಧ ನೀರಿನ ಘಟಕವನ್ನು 2 ಶಾಲೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ರೊ| ಜಾನ್ ಆರ್ ಡಿ ಸಿಲ್ವ ನಿರ್ಗಮನ ಕಾರ್ಯದರ್ಶಿ ರೊ| ಮಧುಕರ್ ಹೆಗ್ಡೆ ಹಾಗೂ ನಿಕಟಪೂರ್ವ ಸಹಾಯಕ ಗವರ್ನರ್ ರೊ| ಶೈಲೇಂದ್ರ ರಾವ್, ರೋಟರಿ ಟ್ರಸ್ಟ್ ಅಧ್ಯಕ್ಷರಾದ ರೊ| ಸೌಜನ್ಯ ಉಪಾಧ್ಯಾಯ, ವಲಯ ಸೇನಾನಿಯಾದ ರೊ| ಸುದೀಪ ಕೆ ಬಿ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪತ್ರಿಕೆಯಾದ ಸರ್ವಿಸ್ ನಿಕಟಪೂರ್ವ ಸಹಾಯಕ ಗವರ್ನರ್ ರೊ| ಶೈಲೇಂದ್ರ ರಾವ್ ಬಿಡುಗಡೆ ಮಾಡಿದರು. ಪತ್ರಿಕೆಯ ಸಂಪಾದಕರಾದ ರೊ| ರೇಖಾ ಉಪಾಧ್ಯಾಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹಾಯಕ ಗವರ್ನರ್ ರೊ| ಅನಿಲ್ ಡೇಸ, ವಲಯ ಸೇನಾನಿ ರೊ| ಸುರೇಶ್ ನಾಯಕ್, ಮುಂತಾದವರು ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷರಾದ ರೊ| ಜಾನ್ ಆರ್ ಡಿಸಿಲ್ವ ಸ್ವಾಗತಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ಮಧುಕರ್ ಹೆಗ್ಡೆ ವರದಿಯನ್ನು ಮಂಡಿಸಿದರು. ರೊ| ವಸಂತ ಎಂ. ರೊ| ಶಶಿಕಲಾಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು. ರೊ| ಗೀತಾ ಕಾಮತ್ ಪ್ರಾರ್ಥನೆಯನ್ನು ಮಾಡಿದರು. ಕಾರ್ಯದರ್ಶಿ ರೊ| ಗಣೇಶ್ ಸಾಲಿಯಾನ್ ಧನ್ಯವಾದ ನೀಡಿದರು.