32.3 C
Udupi
Friday, April 24, 2026
spot_img
spot_img
HomeBlogರೈತರಿಗೆ ಎರಡು ಬಂಪರ್ ನ್ಯೂಸ್ ಕೊಟ್ಟ ಸರ್ಕಾರ

ರೈತರಿಗೆ ಎರಡು ಬಂಪರ್ ನ್ಯೂಸ್ ಕೊಟ್ಟ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ರೈತರಿಗೆ ಉತ್ತಮ ಬೆಲೆ ಒದಗಿಸಲು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಳಿತವನ್ನು ನಿಯಂತ್ರಿಸುವ ಸಲುವಾಗಿ 35,000 ಕೋಟಿ ರೂ. ವೆಚ್ಚದ ಪ್ರಧಾನ ಮಂತ್ರಿ ಅನ್ನದಾತ ಆಯ್‌ ಸಂರಕ್ಷಣಾ ಅಭಿಯಾನ (ಪಿಎಂ-ಆಶಾ) ಯೋಜನೆಯನ್ನು ಮುಂದುವರೆಸಲು ಅನುಮೋದನೆ ನೀಡಿದೆ.

ರೈತರು ಮತ್ತು ಗ್ರಾಹಕರಿಗೆ ಉಪಯೋಗವಾಗುವಂತೆ ಬೆಲೆ ಬೆಂಬಲ ಯೋಜನೆ (ಪಿಎಸ್‌ಎಸ್‌) ಮತ್ತು ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್‌)ಯನ್ನು ಒಗ್ಗೂಡಿಸಲಾಗಿದೆ. ಇದರಿಂದಾಗಿ ಪಿಎಂ-ಆಶಾ ಯೋಜನೆ ಪಿಎಸ್‌ಎಸ್‌, ಪಿಎಸ್‌ಎಫ್‌, ಬೆಲೆ ಕೊರತೆ ಪಾವತಿ ಯೋಜನೆಯ(ಪಿಒಪಿಎಸ್‌), ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ(ಎಂಐಎಸ್‌) ಅಂಶಗಳನ್ನು ಒಳಗೊಂಡಿರಲಿದೆ.

ಹಿಂಗಾರು ಬೆಳೆಗಾರರಿಗೆ ಕೈಗೆಟುಕುವ ದರದಲ್ಲಿ ಕೃಷಿ ಪೋಷಕಾಂಶಗಳನ್ನು ವಿತರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲೆ 24474 3 ಕೋಟಿ ರು. ಸಬ್ಸಿಡಿಯನ್ನು ಘೋಷಿಸಿದೆ.

ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ರೈತರಿಗೆ ಪಿ&ಕೆ ರಸಗೊಬ್ಬರದ 28 ಗ್ರೇಡ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸುವುದು ಇದರ ಉದ್ದೇಶವಾಗಿದ್ದು, ಇದು 2024ರ ಅಕ್ಟೋಬರ್‌ನಿಂದ 2025ರ ಮಾರ್ಚ್‌ವರೆಗೆ ಅನ್ವಯಿಸುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page