ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ಕಾರ್ಕಳ:” ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ,ನಾವು ಪ್ರಕೃತಿಯ ಒಂದು ಭಾಗ” ಈ ನಿಟ್ಟಿನಲ್ಲಿ ಜೂನ್ 05 ವಿಶ್ವ ಪರಿಸರ ದಿನಾಚರಣೆಯನ್ನು ಕಾರ್ಕಳದ ಜೋಡುರಸ್ತೆಯಲ್ಲಿರುವ ರೈಟ್ ಟ್ಯಾಕ್ಸ್ ಮೇಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳು ಸಂಸ್ಥೆಯ ಸುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಹಿರಿಯಂಗಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಮೆಸ್ಕಾಂ ಕಾರ್ಕಳ ವಿಭಾಗ ದ ಲೆಕ್ಕಧಿಕಾರಿ ಗಿರೀಶ್ ರಾವ್ ಪಾಲ್ಗೊಂಡಿದ್ದರು.
