
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯ ಕಾರಣ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಹೆರ್ಮೆ ಪ್ರದೇಶದಲ್ಲಿ ನಡೆದ ಭೂಕುಸಿತ ಸ್ಥಳಕ್ಕೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಕಾಂಗ್ರೆಸ್ ನಿಯೋಗವು ಬೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿತು. ಭೂಕುಸಿತದ ವ್ಯಾಪ್ತಿಗೆ ಒಳಪಡುವ ಪರಿಸರದ ಮನೆಗಳನ್ನು ಸ್ಥಳಾಂತರಿಸುವ ಕೆಲಸ ಈಗಾಗಲೆ ನಡೆದಿದ್ದು ಇನ್ನೂ ಸ್ಥಳಾಂತರದ ಅಗತ್ಯವಿದ್ದರೆ ಅಂತಹ ಮನೆಗಳಿಗೆ ವಸತಿಯನ್ನು ಕಲ್ಪಿಸಲು ಕಾಂಗ್ರೆಸ್ ಪಕ್ಷದ ವತಿಯ ನೆರವು ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಭೂನ್ಯಾಯ ಮಂಡಲಿ ಸದಸ್ಯ ರಮೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕೆ.ಎಂ.ಎಫ್. ನಿರ್ದೇಶಕ ಸುಧಾಕರ್ ಶೆಟ್ಟಿ, ಪುರಸಭೆಯ ಮಾಜಿ ಸದಸ್ಯ ವಿವೇಕ್ ಶೆಣೈ, ಸಂದೇಶ್ ಜೈನ್, ಉಪಸ್ಥಿತಿತರಿದ್ದರು.

























































