
ಮೇ 7 ರಿಂದ 10ರ ವರೆಗೆ ಗೋವಾದಲ್ಲಿ ನಡೆದ ಭಾರತ ಯುವ ಕ್ರೀಡಾ ಅಭಿವೃದ್ಧಿ ಒಕ್ಕೂಟ ಆಯೋಜಿಸಿದ ಮುಕ್ತ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ 50 ಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದು, ಇದರಲ್ಲಿ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಬೆಳ್ಳಿ ಪದಕವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಖ್ಯಾತ ಫುಟ್ಬಾಲ್ ತರಬೇತುದಾರ ಶ್ರೀಯುತ ಸುರೇಶ್ ಶೆಟ್ಟಿ ಅವರು ಮಾರ್ಗದರ್ಶನ ನೀಡಿದ್ದರು. ದೈಹಿಕ ಶಿಕ್ಷಕರಾದ ಪ್ರತಾಪ್ ಮತ್ತು ಶಿಲ್ಪಾ ಶೆಟ್ಟಿ ಅವರು ತಂಡದ ನೇತೃತ್ವ ವಹಿಸಿದ್ದರು .ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.























