
ಕಾರ್ಕಳ: ಯುವಶಕ್ತಿ ಸಮೂಹ ಸಂಸ್ಥೆಗಳು, ಕಾಳಿಕಾಂಬ ಕರಿಯಕಲ್ಲು ಕಾರ್ಕಳ ಇದರ ವತಿಯಿಂದ ಇತ್ತೀಚೆಗೆ ಅಗಲಿದ ಯುವಶಕ್ತಿ ಎಜುಕೇಷನ್ ಸೊಸೈಟಿ ಗೌರವಾಧ್ಯಕ್ಷರಾದ ನರಸಿಂಹ ಪುರಾಣಿಕ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಪುರಾಣಿಕ್ ಸಹೋದರ ವೆಂಕಟೇಶ್ ಪುರಾಣಿಕ್ ರವರು ಪುಷ್ಪಾoಜಲಿಗೈದರು.
ಶಾಸಕರಾದ ವಿ.ಸುನೀಲ್ ಕುಮಾರ್ ನುಡಿನಮನ ಸಲ್ಲಿಸುತ್ತ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲಾಪೇಕ್ಷಯಿಲ್ಲದೇ ದುಡಿದ ನರಸಿಂಹ ಪುರಾಣಿಕರವರ ಸೇವೆಯನ್ನು ಸ್ಮರಿಸಿದರು. ಬಿಲ್ಲವ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಿ. ಆರ್ ರಾಜು, ಕರ್ನಾಟಕ ರಾಜ್ಯ ಸ್ಟೋನ್ ಕ್ರೆಶರ್ ಅಸೋಸಿಯೇಷನ್ ಅಸೋಸಿಯೇಷನ್ ಇದರ ರಾಜ್ಯಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಸಂಸ್ಥೆಯ ಪೋಷಕರಾದ ಕಮಲಾಕ್ಷ ಕಾಮತ್, ಎಜುಕೇಷನ್ ಸೊಸೈಟಿ ಸಂಚಾಲಕರಾದ ಅಬ್ದುಲ್ ಖಾಲಿಕ್, ಮುಖ್ಯಶಿಕ್ಷಕಿ ನಳಿನಾಕ್ಷಿ ಹೆಗ್ಡೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಪ್ರಶಾಂತ್ ಕೋಟ್ಯಾನ್, ಎಜುಕೇಷನ್ ಸೊಸೈಟಿ ಅಧ್ಯಕ್ಷರಾದ ಸುಧಾಕರ ಪ್ರಭು, ನಿರ್ದೇಶಕರಾದ ಸುರೇಖಾ ಪ್ರದೀಪ್ ಕೋಟ್ಯಾನ್, ಗುರುದತ್ ಶೆಣೈ ಮಹಿಳಾ ಮಂಡಲ ಅಧ್ಯಕ್ಷರಾದ ಪ್ರಮೀಳಾ ಪ್ರಶಾಂತ್ ಉಪಸ್ಥಿತರಿದ್ದರು. ಶಿವಾನಂದ ಬಂಗೇರ ನಿರೂಪಿಸಿದ ಕಾರ್ಯಕ್ರಮದಲ್ಲಿ ಸುರೇಶ್ ಮೊಯ್ಲಿ ಧನ್ಯವಾದ ಸಲ್ಲಿಸಿದರು.