ಶಿಕ್ಷಣ,ಕ್ರೀಡೆ,ಕಲೆ,ಸಂಸ್ಕೃತಿ ಭಾಷೆ ನಾಡು ನುಡಿ ಹಾಗೂ ರಾಷ್ಟ್ರೀಯತೆಗೆ ಆಳ್ವ ರ ಕೊಡುಗೆ ಅನನ್ಯವಾದದು – ಶಾಸಕ ಸುನೀಲ್ ಕುಮಾರ್
ನಾನೊಂದು ಸವಕಲು ನಾಣ್ಯವಾಗದೆ ನಿತ್ಯ ಚಲಾವಣೆಯಲ್ಲಿರುವ ನಾಣ್ಯವಾಗಿ ಕೆಲಸ ಮಾಡುತ್ತಿದ್ದೇನೆ – ಡಾ. ಎಂ ಮೋಹನ್ ಆಳ್ವ
ಆಳ್ವರು ಜೀವನದಲ್ಲಿ ಎಷ್ಟು ಸುಖ ಕಂಡಿದ್ದಾರೋ? ಅದಕ್ಕಿಂತ ಮಿಗಿಲಾದ ಕಷ್ಟವನ್ನು ಕೂಡ ಅನುಭವಿಸಿದ್ದಾರೆ – ಎನ್. ವಿನಯ್ ಹೆಗ್ಡೆ
ನುಡಿ-ಸಿರಿ ಸಾಧಕನಿಗೆ 72 “ಸವ್ಯಸಾಚಿ ಸಂಭ್ರಮ”

“ಎಪ್ಪತ್ತೆರಡರ ಹುಟ್ಟುಹಬ್ಬದ ಬಳಿಕ ಡಾ.ಎಂ. ಮೋಹನ ಆಳ್ವರು ‘ಸವ್ಯಸಾಚಿ ಡಾ.ಮೋಹನ್ ಆಳ್ವ’ ಎಂದು ಕರೆಸಿಕೊಂ ಡಿದ್ದಾರೆ. ಒಬ್ಬ ವ್ಯಕ್ತಿ ಬದುಕಿನಲ್ಲಿ ಏನನ್ನು – ಸಾಧಿಸಬಹುದು, ಯಾವ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಸಾರ್ಥಕತೆ ಪಡೆಯ ಬಹುದು ಎನ್ನುವುದಕ್ಕೆ ಆಳ್ವರೇ ಸಾಕ್ಷಿ,” ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಕುಕ್ಕುಂದೂರು ಗಣಿತನಗರದ ಜ್ಞಾನ ಸುಧಾ ಆವರಣದಲ್ಲಿ ಶುಕ್ರವಾರ ಮೂಡುಬಿದಿರೆಯ ಡಾ.ಎಂ.ಮೋಹನ ಆಳ್ವನುಡಿ-ಸಿರಿ ಸಾಧಕನಿಗೆ 72 ಸವ್ಯ ಸಾಚಿ ಸಂಭ್ರಮದಲ್ಲಿ ಮಾತನಾಡಿದರು.
”ಮಾನವರೆಲ್ಲರಲ್ಲೂ ಪ್ರೀತಿ, ಆತ್ಮೀಯತೆ, ವಿಶ್ವಾಸಾರ್ಹತೆ ಗಳಿಸಲು ಕಷ್ಟ – ಸಾಧ್ಯ. ಆದರೆ ಆಳ್ವರು ಆ ಎಲ್ಲ ಅರ್ಹತೆ ಹೊಂದಿದ್ದಾರೆ. ಪ್ರಸ್ತುತ ಸವ್ಯಸಾಚಿ ಎನ್ನುವುದು ಅವರು ಸಲ್ಲಿಸಿದ ಸೇವೆಗೆ ಸಂದ ಗೌರವ. ಅವರಲ್ಲಿರುವ ಸದ್ಗುಣಗಳು – ಅವರನ್ನು ಈ ಎತ್ತರದ ಸ್ಥಾನಮಾನಕ್ಕೆ ತಂದು – ನಿಲ್ಲಿಸಿದೆ,” ಎಂದರು.

ಶಾಸಕ ವಿ.ಸುನಿಲ್ ಕುಮಾರ್ ಮಾತ ನಾಡಿ, ”ಹಲವು ಕ್ಷೇತ್ರಗಳ ಸಾಧನೆಗಳಿಗೆ → ಮೇಲ್ಪಂಕ್ತಿ ಹಾಕಿಕೊಟ್ಟವರು. ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಭಾಷೆ, ನಾಡುನುಡಿ ಹಾಗೂ ರಾಷ್ಟ್ರೀಯತೆಗೆ ಆಳ್ವರ ಕೊಡುಗೆ ಅನನ್ಯವಾ ದುದು. 17 ತಿಂಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ರಾಜ್ಯ ಸಚಿವನಾಗಿ ಸೇವೆ ಸಲ್ಲಿಸುವ ಸಂದರ್ಭ ನನ್ನ ಹಿಂದಿನ ಶಕ್ತಿ ಅವರೇ ಆಗಿದ್ದರು,” ಎಂದರು.
ಅಭಿನಂದನೆ ಸ್ವೀಕರಿಸಿದ ಡಾ.ಎಂ. ಮೋಹನ ಆಳ್ವಮಾತನಾಡಿ, “ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಯ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ. ವ್ಯಕ್ತಿತ್ವದಲ್ಲಿ ವ್ಯಾಪಾರ ಮನೋಭಾವನೆ ಎಂದಿಗೂ ಬರಬಾರದು. ನಾನೆಂದೂ ಸವಕಲು ನಾಣ್ಯವಾಗದೆ, ನಿತ್ಯ ಚಲಾವಣೆ ಯಲ್ಲಿರುವ ನಾಣ್ಯವಾಗಿ ಕೆಲಸ ಮಾಡುತ್ತಿ ದ್ದೇನೆ. ದಿನನಿತ್ಯ ವಿದ್ಯಾರ್ಥಿಯಾಗಿ, ಅದ ರಲ್ಲೂ ಬಯಲು ಶಾಲೆ ವಿದ್ಯಾರ್ಥಿಯಾಗಿ ಇಂದಿಗೂ ವಿದ್ಯಾರ್ಜನೆ ಮಾಡುತ್ತಿದ್ದೇನೆ. ಪಠೇತರ ಚಟುವಟಿಕೆಯಲ್ಲಿರುವ ಆಸಕ್ತಿ ಮತ್ತು ದೇಶದ ಮೇಲಿನ ಅಪಾರ ಪ್ರೀತಿಯ ಪರಿಣಾಮ, ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯ ವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶ ನನ್ನ ಭಾಗ್ಯ,”

ಎಂದರು. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ‘ಡಾ.ಮೋಹನ್ ಆಳ್ವರಿಗೆ ನೂರರ ಸಂಭ್ರಮವನ್ನು ಆಚರಿಸುವ ಅವ ಕಾಶ ದೇವರು ಕರುಣಿಸಲಿ,” ಎಂದರು. ಅಜೆಕಾರು ಪದ್ಮಗೋಪಾಲ ವಿದ್ಯಾಸಂಸ್ಥೆ
ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಮಾತನಾಡಿ, “ಆಳ್ವರು ಎಂದೂ ಸನ್ಮಾನಗಳಿಗೆ ಒಪ್ಪುವವರಲ್ಲ. ಅವರೇ ಅದೆಷ್ಟೋ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿದವರು. ಪ್ರಸ್ತುತ ಅವರ ಹುಟ್ಟುಹಬ್ಬ ಆಚರಿಸುವ ಅವಕಾಶ ಕಾರ್ಕಳದ ಜನತೆಗೆ ಸಿಕ್ಕಿರುವುದು ಭಾಗ್ಯ,” ಎಂದರು.
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ವಿನಯ ಹೆಗ್ಡೆ ಮಾತನಾಡಿ, “ಆಳ್ವರು ಜೀವನದಲ್ಲಿ ಎಷ್ಟು ಸುಖ ಕಂಡಿದ್ದಾರೋ? ಅದಕ್ಕಿಂತ ಮಿಗಿಲಾದ ಕಷ್ಟವನ್ನು ಕೂಡ ಅನುಭವಿಸಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳನ್ನು ರೂಪಿಸಿ, ಸಮಾಜಕ್ಕೆ ನೀಡಿದ ಗೌರವ, ಸಂತೃಪ್ತಿ ಅವರಿಗೆ ಪ್ರಾಪ್ತಿಯಾಗುತ್ತದೆ,” ಎಂದರು.
ಇದೇ ಸಂದರ್ಭ ಡಾ.ಎಂ.ಮೋಹನ್ ಆಳ್ವರ ಸಾಧನೆಗಳ ಕುರಿತು ಸಿದ್ದಪಡಿಸಿದ ‘ಸವ್ಯಸಾಚಿ’ ಪುಸ್ತಕ ಕಾರ್ಯಕ್ರಮ ಬಿಡುಗಡೆ ನಡೆಯಿತು. ವಿದ್ಯಾಸಂಸ್ಥೆಯಿಂದ ಆರೋಗ್ಯ ಚಿಕಿತ್ಸೆಗೆ ಸಹಾಯಧನ ವಿತರಣೆ ನಡೆಯಿತು. ಸಂಗೀತಾ ಕಾರ್ಯಕ್ರಮ ನಿರೂಪಿಸಿದರು.
