31.6 C
Udupi
Thursday, April 30, 2026
spot_img
spot_img
HomeBlogಯಶ್ ಸುದೀಪ್ ಮತ್ತು ರಿಷಬ್ ಶೆಟ್ಟಿ ಭವಿಷ್ಯ ನುಡಿದ ನಾಗರಾಜ್ ಕೋಟಿ

ಯಶ್ ಸುದೀಪ್ ಮತ್ತು ರಿಷಬ್ ಶೆಟ್ಟಿ ಭವಿಷ್ಯ ನುಡಿದ ನಾಗರಾಜ್ ಕೋಟಿ

ಕನ್ನಡ ಚಿತ್ರರಂಗದ ಅದ್ಭುತ ನಟ ನಾಗರಾಜ್‌ ಕೋಟಿ ಅವರು ಜೋತಿಷ್ಯ ಶಾಸ್ತ್ರಿ ಕಲಿತಿದ್ದು ಸಾವಿರಾರೂ ಜನ ಸಾಮಾನ್ಯರಿಗೆ ಹಾಗೂ ನೂರಾರು ಸೆಲೆಬ್ರಿಟಿಗಳಿಗೆ ತಮ್ಮ ಭವಿಷ್ಯ ನುಡಿದಿದ್ದಾರೆ.

ಕನ್ನಡ ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ನಾಗರಾಜ್ ಕೋಟಿ ಗಮನಾರ್ಹವಾಗಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡುತ್ತಿರುವ ಯಶ್, ಸುದೀಪ್ ಮತ್ತು ರಿಷಬ್ ಶೆಟ್ಟಿ ಭವಿಷ್ಯದ ಬಗ್ಗೆ ನುಡಿದಿದ್ದಾರೆ.

ಯಶ್:

‘ವೃಶ್ಚಿಕಾ ರಾಶಿಯಲ್ಲಿ ಜನಿಸಿದ ಯಶ್ ಅವರಿಗೆ ಈಗ ಶುಕ್ರದೆಸೆ ನಡೆಯುತ್ತಿರುವ ಕಾರಣ 2028ವರೆಗೂ ಸಮಯ ತುಂಬಾ ಚೆನ್ನಾಗಿದೆ. ವೃಶ್ಚಿಕಾ ರಾಶಿ ಅವರಿಗೆ ಶುಕ್ರದೆಸೆ ಬಂದು ಬಿಟ್ಟರೆ ತುಂಬಾ ಚೆನ್ನಾಗಿ ಆಗುತ್ತಾರೆ’ ಎಂದು ಹೇಳಿದ್ದಾರೆ.

ರಿಷಬ್ ಶೆಟ್ಟಿ:

‘ರಿಷಬ್ ಶೆಟ್ಟಿ ಅವರ ತಂದೆನೇ astrologer ಎಂದು ನನಗೆ ಗೊತ್ತಾಗಿದೆ. ಹೀಗಾಗಿ ಅವರಿಂದ ಮೊದಲು ಸಲಹೆ ಪಡೆದುಕೊಂಡು ಕೆಲಸ ಮಾಡುತ್ತಾರೆ. ಅಲ್ಲದೆ ಅವರಿಗೆ ದೈವ ಪ್ರೇರಣೆ ಆಗಿರುತ್ತದೆ. ಇಷ್ಟು ದೊಡ್ಡ ಹಂತಕ್ಕೆ ಹೆಸರು ಮಾಡುವುದಕ್ಕೆ ಗ್ರಹಗಳ ಕೃಪೆ ಮತ್ತು ಸಂದರ್ಭದ ಕೃಪೆ ತುಂಬಾ ಮುಖ್ಯವಾಗುತ್ತದೆ. ರಿಷಬ್ ಅವರ ಒಳ್ಳೆ ದೆಸೆ ಕಾಂತಾರ 2 ಆಗುವವರೆಗೂ ಇದ್ಯಾ ಅಥವಾ ಅದಾದ ಮೇಲೂ ಇದ್ಯಾ ಎಂದು ನನಗೆ ಗೊತ್ತಿಲ್ಲ ಏಕೆಂದರೆ ಅವರ ರಾಶಿ ನಕ್ಷತ್ರ ನನಗೆ ಗೊತ್ತಿಲ್ಲ. 15 ವರ್ಷ ಸೈಕಲ್ ಹೊಡೆದಿರುತ್ತಾರೆ ಆದರೆ ಅವರ ಅದೃಷ್ಟದ ದೆಸೆ ಕಾಂತಾರ ಸಮಯದಲ್ಲಿ ಇತ್ತು’ ಎಂದು ನಾಗರಾಜ್ ಕೋಟೆ ಹೇಳಿದ್ದಾರೆ.

ಸುದೀಪ್:

ಸುದೀಪ್ ತುಂಬಾ ಬುದ್ಧಿವಂತ, ಅವರ ರಾಶಿ ಗೊತ್ತಿಲ್ಲ. ಹೀಗಾಗಿ ಮುಖ ನೋಡಿ ಹೇಳುತ್ತೀನಿ. ಸಿನಿಮಾಗಿಂತ ಮೀರಿದ ಜ್ಞಾನ ಅವರಿಗಿದೆ…ಸುದೀಪ್ ಅದ್ಭುತ ಜ್ಞಾನಿ ಆದರೆ ಏನೂ ತೋರಿಸಿಕೊಳ್ಳುವುದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಮಾತನಾಡುವುದನ್ನು ಅಷ್ಟೂ ಸ್ಕಿಟ್ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page