
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್, ಅಸೋಸಿಯೇಷನ್ ಪದಾಧಿಕಾರಿಗಳು, ಆರ್‌ಬಿಐ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳ ಜೊತೆ ಸಹಕಾರ, ಕಂದಾಯ, ಗೃಹ, ಕಾನೂನು, ಹಣಕಾಸು ಇಲಾಖೆ ಸಭೆ ಮಾಡಿದ ಬಳಿಕ ಮಾತನಾಡಿ ಮೈಕ್ರೋ ಫೈನಾನ್ಸ್ ಮತ್ತು ಹಣವನ್ನು ಸಾಲವಾಗಿ ನೀಡುವ ಕಂಪನಿಗಳಿಗೆ ಕಾನೂನು ಜಾರಿ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಕಾನೂನು ಕ್ರಮ:
- ಹಣವನ್ನು ವಸೂಲಿ ಮಾಡುವಾಗ ಆರ್‌ಬಿಐ ನಿಯಮ ಪಾಲನೆ ಮಾಡಬೇಕು.
- ಕಾನೂನು ಏನು ಹೇಳುತ್ತದೋ ಅದಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡುವಂತಿಲ್ಲ.
- ಸಂಜೆ 5 ಗಂಟೆ ನಂತರ ವಸೂಲಿ ಮಾಡುವಂತಿಲ್ಲ.
- ಗೂಂಡಾ, ರೌಡಿಗಳನ್ನ ಬಿಟ್ಟು ವಸೂಲಿ ಮಾಡಬಾರದು.
- ಕಾನೂನು ಉಲ್ಲಂಘನೆ ಮಾಡಿದ್ರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.
- ಪ್ರತಿ ಡಿಸಿ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭ





















