
ಬಕ್ರೀದ್ ಹಬ್ಬದ ಪ್ರಯುಕ್ತ ಲಕ್ಷಾಂತರ ಜನ ಹಜ್ ಯಾತ್ರೆ ಕೈಗೊಂಡಿದ್ದು, ಮೆಕ್ಕಾದಲ್ಲಿ ತಾಪಮಾನ ವಿಪರೀತ ಏರಿಕೆ ಕಂಡಿದ್ದು 554 ಹೆಚ್ಚು ಜನ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೆಕ್ಕಾದಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ನಷ್ಟು ವರದಿಯಾಗಿದ್ದು,
ತಾಪಮಾನ ಏರಿಕೆಯಿಂದ ,ಸಾವಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಮೃತರ ಪೈಕಿ 323 ಮಂದಿ ಈಜಿಪ್ಟಿಯನ್ನರು , ಕನಿಷ್ಠ 60 ಮಂದಿ ಜೋರ್ಡಾನಿಯನ್ನರು ಹಾಗೂ ಉಳಿದ ಮಂದಿ ವಿವಿಧ ದೇಶಗಳಿಗೆ ಸೇರಿದವರು ಎನ್ನಲಾಗುತ್ತಿದೆ. ಈ ವರ್ಷ ಸುಮಾರು 18 ಲಕ್ಷ ಜನರು ಹಜ್ ಜಾತ್ರೆಯಲ್ಲಿ ಭಾಗವಹಿಸಿದ್ದರು.