
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುವ ವೀಕೆಂಡ್ ಸಂಸ್ಕೃತ ಕಾರ್ಯಕ್ರಮದ ಕುರಿತು ಉಲ್ಲೇಖ….
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುವ ವೀಕೆಂಡ್ ಸಂಸ್ಕೃತ ಕಾರ್ಯಕ್ರಮದ ಕುರಿತು 111ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿ ಭಾನುವಾರ ಕಬ್ಬನ್ ಪಾರ್ಕ್‌ನಲ್ಲಿ ಸೇರುವ ಜನರು ಸಂಸ್ಕೃತಿದಲ್ಲಿಯೇ ಮಾತನಾಡುತ್ತಾರೆ. ಹಿರಿಯರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಬಗ್ಗೆ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯಲ್ಲಿಯೇ ಚರ್ಚೆ ನಡೆಸುತ್ತಾರೆ. ನಮ್ಮ ಭಾಷೆ ಉಳಿಸುವ ನಿಟ್ಟಿನಲ್ಲಿ ಇದು ದೊಡ್ಡಮಟ್ಟದ ಕೆಲಸವಾಗಿದೆ. ಜನರು ಸ್ವಯಂ ಪ್ರೇರಿತವಾಗಿ ಇಲ್ಲಿಗೆ ಬಂದು ಸಂಸ್ಕೃತ ಭಾಷೆಯನ್ನು ಆನಂದಿಸುತ್ತಾರೆ ಎಂದು ಹೇಳಿದರು.
ಜೂನ್ 30ರಂದು ಆಲ್ ಇಂಡಿಯಾ ರೇಡಿಯೋದ ಸಂಸ್ಕೃತ ಬುಲೆಟಿನ್ ತನ್ನ ಪ್ರಸಾರದ 50 ವರ್ಷಗಳನ್ನು ಪೂರೈಸುತ್ತಿದ್ದು ಈ ಬುಲೆಟಿನ್ ಅನೇಕ ಜನರನ್ನು 50 ವರ್ಷಗಳಿಂದ ನಿರಂತರವಾಗಿ ಸಂಸ್ಕೃತದೊಂದಿಗೆ ಸಂಪರ್ಕಿಸಿದೆ. 50 ವರ್ಷ ಸಂಸ್ಕೃತ ಬುಲೆಟಿನ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಯನ್ನು ಪ್ರಧಾನಿಗಳು ಅಭಿನಂದಿಸಿದರು.
2014 ಅಕ್ಟೋಬರ್ 3 ರಂದು ಪ್ರಧಾನಿಗಳ ಮನ್ ಕಿ ಬಾತ್ ಮೊದಲ ಕಾರ್ಯಕ್ರಮ ಪ್ರಸಾರವಾಗಿದ್ದು ಇಂದಿಗೆ 111 ಸಂಚಿಕೆಗಳು ಪ್ರಸಾರಗೊಂಡಿದೆ. ಪ್ರತಿ ಸಂಚಿಕೆಯಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಪರಿಚಯ ಮಾಡಿಸುತ್ತಾರೆ. ಇದರ ಜೊತೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯೇತರ ವಿಷಯಗಳ ಕುರಿತು ಸುದೀರ್ಘವಾಗಿ ಈ ಕಾರ್ಯಕ್ರಮದಲ್ಲಿ ಚರ್ಚಿಸುತ್ತಾರೆ.