27 C
Udupi
Friday, June 26, 2026
spot_img
spot_img
HomeBlogಮೂಡಾ,ವಾಲ್ಮೀಕಿ ನಿಗಮ ಪ್ರಕರಣ ನೆಪವಾಗಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಖಂಡನೀಯ

ಮೂಡಾ,ವಾಲ್ಮೀಕಿ ನಿಗಮ ಪ್ರಕರಣ ನೆಪವಾಗಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಖಂಡನೀಯ

ಬಿಜೆಪಿ ನಾಯಕರ ಭ್ರಷ್ಟ ರಾಜಕೀಯ ಹಾಗೂ ಸ್ವಾರ್ಥ ಸಾಧನೆಯಿಂದ, ಪಕ್ಷದ ಅಧೋಪಥನ: ಬಿಪಿನಚಂದ್ರ ಪಾಲ್ ಆಕ್ರೋಶ

ಕಾರ್ಕಳ: ಧಾನಿ ಮೋದಿ ಶಾ ನೇತೃತ್ವದ ಬಿಜೆಪಿ ರಾಜ್ಯದಲ್ಲಿ ಮೂಡಾ ಮತ್ತು ವಾಲ್ಮಿಖೀ ನಿಗಮ ಪ್ರಕರಣವನ್ನು ನೆಪವಾಗಿಸಿ ರಾಜ್ಯಪಾಲರನ್ನು ಬಳಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಂಧಿಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿರುವುದು ಖಂಡನೀಯ. ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಮುಂದಿನ ದಿನಗಳಲ್ಲಿ ದೇಶವ್ಯಾಪಿ ಮಹತ್ತರ ಜನಪರ ಕ್ರಾಂತಿಯೊಂದಕ್ಕೆ ಕಾರಣವಾದೀತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.


ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಂವಿಧಾನದ ಆಶಯದಂತೆ ಸರಕಾರದ ಸೌಲಭ್ಯಗಳನ್ನು ತಾರತಮ್ಯ ಭ್ರಷ್ಟಾಚಾರ ರಹಿತವಾಗಿ ಜನರಿಗೆ ತಲಪಿಸಬಲ್ಲ ಒಬ್ಬ ನಿರ್ಭಿಡೆಯ ಜನಪರ ಆಡಳಿತಗಾರ. ಮೂಡಾ ಪ್ರಕರಣದಲ್ಲಿ ಸರಕಾರವೇ ನೇಮಿಸಿದ ಮಾಜಿ ನ್ಯಾಯಮೂರ್ತಿ ನೇತೃತ್ವದ ಏಕ ಸದಸ್ಯ ಪೀಠದ ಆಯೋಗ ವಿಚಾರಣೆ ನಡೆಸುತ್ತಿದ್ದರೆ ವಾಲ್ಮೀಖಿ ನಿಗಮದ ಹಗರಣವನ್ನು ಸರಕಾರದ ವಿಶೇಷ ತನಿಖಾ ದಳ ತನಿಖೆ ನಡೆಸುತ್ತಿದೆ. ಆದಾಗ್ಯೂ ಈ ಪ್ರಕರಣಗಳಲ್ಲಿ ಕೇಂದ್ರೀಯ ಸ್ವಾಯತ್ತ ಸಂಸ್ಥೆಗಳು ಮೂಗು ತೂರಿಸುತ್ತಿರುವುದು ಈ ದೇಶದ ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಮೊಟ್ಟೆ ಹಗರಣವೂ ಸೇರಿ ಹಲವು ಪ್ರರಕರಣಗಳ ದೂರಿನ ಬಗ್ಗೆ ಸ್ಪಂಧಿಸದ ರಾಜ್ಯಪಾಲರು ಮುಡಾ ಪ್ರಕರಣದ ಬಗ್ಗೆ ಹೇಗೆ ಸ್ಪಂಧಿಸಿದರು ಎನ್ನುವುದು ಯಕ್ಷ ಪ್ರಶ್ನೆಯೇನಲ್ಲ. ಅದೇನಿದ್ದರೂ ಸ್ವಾಯತ್ತತೆ ಇದೆ ಎಂದ ಮಾತ್ರಕ್ಕೆ ಸ್ವಾಯತ್ತ ಸಂಸ್ಥೆಗಳಾಗಲೀ ರಾಜ್ಯಪಾಲರೇ ಆಗಲಿ ಸಂವಿಧಾನ ಕೊಡಮಾಡಿದ ನಿಗಧಿತ ಹೊಣೆಗಾರಿಕೆಯಡಿಯಲ್ಲಿ ಕಾರ್ಯನಿರ್ವಹಿಸದೆ ಇದ್ದಾಗ ಅವರು ಪ್ರಶ್ನಾತೀತರಾಗಲು ಸಾಧ್ಯವಿಲ್ಲಎಂದು ಕಾಂಗ್ರೆಸ್ ಹೇಳಿದೆ.
ರಾಜ್ಯದಲ್ಲಿ ಮಳೆಯ ರೌದ್ರ ತಾಂಡವ ಜನರನ್ನು ಬಲಿತೆಗೆದು ಕೊಳ್ಳುತ್ತಿದೆ. ನೆರೆಯಿಂದ ಕೃಷಿ ನಾಶವಾಗಿ ರೈತ ದಿಕ್ಕೆಟ್ಟಿದ್ದಾನೆ. ಒಂದು ಪ್ರತಿಪಕ್ಷವಾಗಿ ಮನೆಮಠ ಕಳೆದು ಕೊಂಡ ಜನರಿಗೆ ಸಾಂತ್ವನ ಹೇಳಬೇಕಿದ್ದ ಬಿಜೆಪಿ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಒಂದುಕಡೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಸರಕಾರದ ಮೇಲೆ ಛೂಬಿಟ್ಟು ಮತ್ತೊಂದು ಕಡೆ ಜನರ ದಿಕ್ಕು ತಪ್ಪಿಸಲು ಮೆರವಣಿಗೆ ಹೊರಟಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿ. ವಾಜಪೇಯಿ, ಅಡ್ವಾನಿ ಯವರಂತಹ ಮಹಾನಾಯಕರು ಕಟ್ಟಿಬೆಳೆಸಿದ ಬಿಜೆಪಿ ಇಂದಿನ ನಾಯಕರ ಸ್ವಾರ್ಥಸಾಧನೆಯ ಭ್ರಷ್ಟ ರಾಜಕೀಯಕ್ಕೆ ಬಲಿಯಾಗಿ ಅಧೋಪಥನಗೊಂಡು ತನ್ನ ಅಸ್ಥಿತ್ವ ಕಳದುಕೊಳ್ಳುವ ದಿನ ದೂರವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page