ಕಾರ್ಕಳ-ಹೆಬ್ರಿ ತಾಲೂಕಿನ 3 ಮತಗಟ್ಟೆಯಲ್ಲಿ ಮತದಾನ

ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಕ್ರಿಯೆಯು ಇಂದು 4 ಗಂಟೆಗೆ ಮುಕ್ತಾಯಗೊಂಡಿತು.
ಜಂಟಿ ತಾಲೂಕಿನ ಕಾರ್ಕಳ,ಹೆಬ್ರಿ,ಅಜೆಕಾರು ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಯು ನಡೆದಿದೆ.ಕಾರ್ಕಳ ತಾಲೂಕಿನ ಪದವಿಧರ ಕ್ಷೇತ್ರದಲ್ಲಿ ಒಟ್ಟು 73.42% ಮತದಾನವಾಗಿದ್ದು,ಶಿಕ್ಷಕರ ಕ್ಷೇತ್ರದಲ್ಲಿ 80.65% ಮತದಾನವಾಗಿದೆ ಹಾಗೂ ಹೆಬ್ರಿ ತಾಲೂಕಿನಲ್ಲಿ ಪದವಿಧರ ಕ್ಷೇತ್ರದಲ್ಲಿ 78.037% ಮತ್ತು ಶಿಕ್ಷಕರ ಕ್ಷೇತ್ರದಲ್ಲಿ 78.32% ಮತದಾನವಾಗಿದೆ.