
ಶಿವಮೊಗ್ಗ: ಶಾಸಕ ಬಿ.ಕೆ ಸಂಗಮೇಶ್ವರ ಭದ್ರಾವತಿಯ ಹೊಳೆ ಹೊನ್ನೂರು ಸರ್ಕಲ್ ಬಳಿ ಉಸ್ಮಾನಿಯಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ‘ಮುಸ್ಲಿಂ ಜನಾಂಗದ ಪ್ರೀತಿಗೆ ಪಾತ್ರನಾಗಿರುವ ನನಗೆ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆ ಇದೆ’ ಎಂದು ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ರದ್ದಾಗಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಕಳೆದ 20 ವರ್ಷಗಳ ಹಿಂದೆ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ಪ್ರಾರಂಭ ಮಾಡಿದ್ದು ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷವೂ ಶಾಂತ ರೀತಿಯಲ್ಲಿ ಮೆರವಣಿಗೆ ಮಾಡುತ್ತಾ ನಮ್ಮ ಗೌರವ ಉಳಿಸಿರುವ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಿಸಿದರೆ ಅಲ್ಲಾಹು ಎಲ್ಲರಿಗೂ ಒಳಿತು ಮಾಡುತ್ತಾರೆ. ಎಲ್ಲರೂ ಸೋದರ ಭಾವನೆಯಿಂದ ಬದುಕು ನಡೆಸೋಣ ಎಂದು ಹೇಳಿದರು.



















