
ಮಂಗಳೂರು: ಸೆಪ್ಟೆಂಬರ್ 9ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಹಿಳೆೊಬ್ಬರು ಹೆದ್ದಾರಿಯಲ್ಲಿರುವ ಗುಂಡಿಗೆ ಬಿದ್ದಿದ್ದು ಇದೇ ವೇಳೆ ಲಾರಿಯೊಂದು ಮಹಿಳೆ ಮೇಲೆ ಹರಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮಾಧವಿ (44) ಎಂಬ ಮಹಿಳೆಯು ಹೆದ್ದಾರಿಯಲ್ಲಿದ್ದ ಗುಂಡಿಯಿಂದ ಸ್ಕೂಟರ್ ಸಮೇತ ಹೆದ್ದಾರಿಗೆ ಬಿದ್ದಿದ್ದು ಇದೇ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಮೀನಿನ ಲಾರಿಯೊಂದು ಮಹಿಳೆ ಮೇಲೆ ಹರಿದು ಹೋದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.



















