
ಪುತ್ತೂರು: ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದು ಈ ವೇಳೆ ಮತಾಂಧ ಸಂಘಟನೆಗಳ ಹೋರಾಟದಿಂದ ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕಾದ ದುಸ್ಥಿತಿ ಹಿಂದೂ ಸಮಾಜಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ಅಪೇಕ್ಷೆ ನಮ್ಮದಾಗಿತ್ತು. ಅಲ್ಲದೆ ಅದು ಬೀದಿಯಲ್ಲಿ ನಿಂತು ಮಾತನಾಡುವ ವಿಷಯ ಆಗಿರಲಿಲ್ಲ. ಸಂತ್ರಸ್ತೆ ಕುಟುಂಬದ ಪರವಾಗಿ ಇಡೀ ಹಿಂದೂ ಸಮಾಜ ನಿಂತಿದ್ದು ಆಕೆಗೆ ನ್ಯಾಯ ಸಿಗಲಿದೆ. ಆದರೆ ಎಸ್ ಡಿಎಪಿಐ ಎಂತಹ ಜಿಹಾದಿ ಮನಸ್ಸಿನ ಸಂಘಟನೆಯ ಹೋರಾಟದಲ್ಲಿ ಸಂತ್ರಸ್ತೆ ತಾಯಿ ಪಾಲ್ಗೊಳ್ಳಬಾರದಿತ್ತು. ಇದಕ್ಕೆ ಸಂಬಂಧಿಸಿದ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.













