
ಮಂಗಳೂರು: ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಹೊಸ ಚಿಂತನೆ ರೂಪಿಸಿದ್ದು ಅದೇನೆಂದರೆ ನಗರದ ಜನತೆಗೆ ಮತಗಟ್ಟೆಗಳ ಮಾಹಿತಿ ನೀಡಲು ಚುನಾವಣೆ ಸ್ಲಿಪ್‌ಗ್ಳಲ್ಲಿ ಕ್ಯುಆರ್ ಕೋಡ್ ನೀಡಿ, ಆ ಮೂಲಕ ಮತದಾನ ಕೇಂದ್ರದ ಮಾಹಿತಿ ನೀಡಲು ನಿರ್ಧರಿಸಲಾಗಿದೆ.
ದೇಶದಲ್ಲೇ ಇದು ಮೊದಲ ಪ್ರಯೋಗವಾಗಿದ್ದು, ಅದರಲ್ಲೂ ಕರ್ನಾಟಕದ ದ.ಕ. ಜಿಲ್ಲೆಯ ನಗರಕ್ಕೆ ಹೊಂದಿಕೊಂಡಿರುವ ಮಂಗಳೂರು ದಕ್ಷಿಣ ಹಾಗೂ ಉತ್ತರ ಕ್ಷೇತ್ರದಲ್ಲಿ “ಸ್ಲಿಪ್’ ಮೂಲಕ ಮತದಾರರಿಗೆ ಮತಗಟ್ಟೆಯ ವಿವರ ಒದಗಿಸಲಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆಯಾಗುವ ನಿರೀಕ್ಷೆಯಿದೆ.
ಈ ಕ್ಯೂಆರ್ ಕೋಡ್ ನ ಉಪಯೋಗವೇನೆಂದರೆ ಮತದಾರರ ಸ್ಲಿಪ್‌ನಲ್ಲಿ ಮತಗಟ್ಟೆಯ ವಿವರ ನಗರದಲ್ಲಿರುವ ಅನೇಕರಿಗೆ ಮತಗಟ್ಟೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಮತದಾನಕ್ಕಾಗಿ ಮತಗಟ್ಟೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಇದನ್ನು ನೀಗಿಸಲು ಕ್ಯುಆರ್ ಕೋಡ್ ನೀಡಲಾಗಿದ್ದು, ಸ್ಕ್ಯಾನ್ ಮಾಡಿದ ವೇಳೆ ಮತಗಟ್ಟೆಯ ಲೊಕೇಷನ್ ಪಡೆಯಬಹುದು. ಈ ಮೂಲಕ ಮತಗಟ್ಟೆ ಹುಡುಕಿ ತೆರಳುವುದನ್ನು ತಪ್ಪಿಸಬಹುದಾಗಿದೆ.ಈ ಕ್ಯೂಆರ್ ಕೋಡ್ ಸ್ಲಿಪ್ ಮೂಲಕ ಮನೆಯಿಂದ ಮತಗಟ್ಟೆ ಎಷ್ಟು ದೂರವಿದೆ ಎನ್ನುವ ವಿವರ ಮಾತ್ರವಲ್ಲದೆ ತೆರಳಲು ಬೇಕಾದ ಸಮಯ ಹಾಗೂ ದಾರಿಯ ಬಗ್ಗೆಯೂ ಮಾಹಿತಿ ಒದಗಿಸುತ್ತದೆ. ಮಾರ್ಗ ಮಧ್ಯದಲ್ಲಿರುವ ವಾಹನ ದಟ್ಟಣೆಯ ವಿವರವನ್ನು ಕೂಡ ತಿಳಿದುಕೊಳ್ಳಲು ಸಾಧ್ಯವಾಗಲಿದ್ದು ಮತಗಟ್ಟೆಯ ಫೋಟೋ ಕೂಡ ಇಲ್ಲಿ ಕಾಣಬಹುದಾಗಿದೆ.