33.1 C
Udupi
Sunday, April 26, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 22)

ಚೇತನ್ ವರ್ಕಾಡಿ

ಎದುರಿನಿಂದ ಬಂದ ಟ್ಯಾಂಕರ್ ಒಂದು ಗುದ್ದಿಯೆ ಬಿಟ್ಟಿತು.ಯೋಚನೆಗಳ ಬೇಲಿ ಮಧ್ಯೆ ಸಿಲುಕಿದ ಮಧುವಿನ ತಲೆಗೆ ಬಲವಾದ ಹೊಡೆತವು ಬಿದ್ದು,ಅಲ್ಲೇ ಕುಸಿದು ಕಾರಿನಲ್ಲೆ ಒರಗಿಬಿಟ್ಟ.ಟ್ಯಾಂಕರ್ ಡ್ರೈವರ್ ನಡೆದ ಘಟನೆ ನೋಡಿ ಅಲ್ಲಿಂದ ಲಾರಿ ಬಿಟ್ಟು ಪರಾರಿಯಾದ.ಪೇಟೆ ಆದುದರಿಂದ ಕ್ಷಣದೊಳಗೆ ಜನಸಾಗರವೆ ಸೇರಿತು.ಮಧು ಹಣವಂತ,ಗುಣವಂತನಾದುದರಿಂದ ಎಲ್ಲರಿಗೂ ಅವನ ಪರಿಚಯ ಇತ್ತು.ತಕ್ಷಣವೇ ಆಂಬುಬುಲೆನ್ಸ್ ಮುಖಾಂತರ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು.ಮನೆಗೂ ಸುದ್ದಿ ಮುಟ್ಟಿತು.ಗೆಳೆಯ ಮಿಥುನ್‌ಗ್ ನಡೆದ ಘಟನೆ ತಿಳಿಯಿತು.ಎಲ್ಲರೂ ಬಂದು ಆಸ್ಪತ್ರೆಯಲ್ಲಿ ಸೇರಿದರು.ಹೆತ್ತವರ ನೋವು ಕಣ್ಣೀರಿನ ಮೂಲಕ ಹರಿದುಹೋಗುತ್ತಿತ್ತು.ಮಿಥುನ್ ಸಮಧಾನ ಪಡಿಸಲು ಇದ್ದ ಶ್ರಮವನ್ನೆಲ್ಲ ಸೇರಿಸಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದ.ಮಧು ಐ ಸಿ.ಯು.ವಿನ ಒಳಗೆ ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದಾನೆ.ಏನಾಗುವುದೊ ಅನ್ನುವ ಭಯ ಎಲ್ಲರ ಮುಖದೊಳಗೆ ಕಾಡುತ್ತಿತ್ತು.ಈ ವಿಚಾರ ಸೌಂಧರ್ಯ‌ಳಿಗೂ ತಿಳಿಯಿತು.ತಂದೆ ಮಗಳು ಇಬ್ಬರೂ ಬಂದು ಜೊತೆಗೂಡಿದರು.ಯಾರನ್ನೂ ಕೂಡ ಪೇಶೆಂಟನ್ನು ನೋಡೋಕೆ ಒಳಗೆ ಬಿಡುತ್ತಿಲ್ಲ. ಕೆಂಪು ಬಣ್ಣದ ಲೈಟ್ ಒಂದು ಎಲ್ಲರನ್ನು ದುರುಗುಟ್ಟಿ ನೋಡುತ್ತಿತ್ತು….
ಎಲ್ಲರ ಮನದೊಳಗೆ ಮಧು ಬದುಕಿದರೆ ಸಾಕು ಅನ್ನೊ ಭಾವ ಮುಖದೊಳಗೆ ಎದ್ದು ಕಾಣುತ್ತಿತ್ತು.ತಾಯಿ ಸುಗಂಧಿ‌ಯನ್ನು ಸಮಧಾನಿಸಲು ಯಾರಿಂದಲೂ ಸಾಧ್ಯವಾಗದಾಯಿತು.ಮಿಥುನ್ , ಮಧು ತುಂಬಾ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದ ದೇವರಿಗೆ ಮನದಲ್ಲೇ ಹರಕೆ ಹೊತ್ತನು. ಗೆಳೆಯನ ಉಸಿರನ್ನು ನಿಲ್ಲಿಸದಿರು ಪರಮಾತ್ಮ ಎಂದು ಕಾಡಿ ಬೇಡಿಕೊಂಡನು.ವಿಧಿಯ ಮುಂದೆ ಎಲ್ಲವೂ ನಶ್ವರ, ಆತನ ಆಟದೊಳಗೆ ನಾವು ಪಾತ್ರಧಾರಿಗಳು ಅಷ್ಟೇ…!

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page