ಕಥೆ (ಭಾಗ- 16)
ಚೇತನ್ ವರ್ಕಾಡಿ

ಮಂಗಳ
ಭಾಗ(16)
✍🏻ಚೇತನ್. ವರ್ಕಾಡಿ…
ಅಂದ ಚಂದಕ್ಕೆ ಸವಾಲೆಸೆಯುವ ಸೌಂದರ್ಯವತಿ ಮಂಗಳ.ಅವಳ ರೂಪ ಕೇಶರಾಶಿ ,ನಡತೆ ಇವುಗಳಿಗೆ ಮನಸೋಲದವರಿಲ್ಲ.ಮನೆತುಂಬ ಹೂವಿನ ಸುಮಧುರ ಪರಿಮಳ ಹರಡಿನಿಂತಿದೆ.ಮಂಗಳ ಕೋಣೆಯಲ್ಲಿ ಮದುಮಗಳಾಗಿ ಶೃಂಗಾರವಾಗಿ ತನ್ನ ಬಾಳಸಂಗಾತಿಯ ಮುಖದರ್ಶನಕ್ಕಾಗಿ ಕಾಯುತ್ತಿದ್ದಾಳೆ.ಮಂಗಳಳ ಮುಖದಲ್ಲಿ ಅದೇನೊ ಹೊಸಕಾಂತಿ ಆದಿನ ಎದ್ದು ಕಾಣುತ್ತಿತ್ತು.ರಾಘವ ಮತ್ತು ಯಶೋಧ ಇಬ್ಬರಿಗೂ ತಮ್ಮ ಮುದ್ದು ಮಗಳಲ್ಲಿ ಎಂದೂ ಕಾಣದ ಆ ನಗುವನ್ನು ಕಂಡು ಅದೇನೊ ಖುಷಿ ಸಂಭ್ರಮ. ಮೊದಲ ಸಲ ಹುಡುಗ ಮಂಗಳಳನ್ನು ನೋಡಲು ದೂರದ ಊರಿನಿಂದ ಬರುತ್ತಿದ್ದಾನೆ.ದೇವೆರೆ ನಮ್ ಮಂಗಳ ಆ ಹುಡುಗನಿಗೆ ಮೆಚ್ಚುಗೆಯಾಗಿ ಅದಷ್ಟು ಬೇಗ ಅವರಿಬ್ಬರ ಮದುವೆಯ ಸಂಭ್ರಮವನ್ನು ಈ ಕಣ್ಣಿಂದ ನೋಡೊ ಸೌಭಾಗ್ಯ ಕರುಣಿಸು ಎಂದು ರಾಘವ ಮನಸಲ್ಲೇ ದೇವರ ಮೊರೆ ಹೋದರೆ ತಾಯಿ ಯಶೋಧ ಕಂಡ ಕಂಡ ದೇವರಿಗೆ ಹರಕೆ ಹೊತ್ತದ್ದು ಆಯ್ತು.ಸಮಯಮೀರುತ್ತಾ ಬರುತ್ತಿದ್ದಂತೆ ಒಂದು ಕಾರು ಬಂದು ಅವರ ಮನೆಮುಂದೆ ನಿಂತೇಬಿಟ್ಟಿತು…ಬಡವನ ಮನೆಗೆ ದೇವರೆ ಬಂದ ಸಂಭ್ರಮ ರಾಘವನಿಗೆ.ಮೊದಲ ಬಾರಿ ತನ್ನ ಮನೆಯ ಅಂಗಳದಲ್ಲಿ ನಿಂತ ಕಾರು ಅದಾಗಿತ್ತು. ಇಬ್ಬರು ಸುಂದರ ಯುವಕರು ಆ ಕಾರಿನಿಂದ ಇಳಿದೇ ಬಿಟ್ಟರು, ಮತ್ಯಾರು ಕಾಣಲೇ ಇಲ್ಲ.ಪೇಟೆಯ ಹುಡುಗರಿಗೆ ಹಳ್ಳಿಯ ಸಂಸ್ಕೃತಿ ತಿಳಿಯೋದು ಕಷ್ಟಾನೆ…ಬಂದವರನ್ನು ಪ್ರೀತಿಯಿಂದ ಹಳ್ಳಿಯ ಸಂಪ್ರದಾಯದಂತೆ ನೀರು ಕೊಟ್ಟು ಬರಮಾಡಿಕೊಂಡ ರಾಘವ..
ರಾಘವನ ಮನೆ ಚಿಕ್ಕದಾಗಿದ್ದರೂ ಮನಸಿನ ಸಿರಿತನ ಎದ್ದುಕಾಣುತ್ತಿತ್ತು.ಇಬ್ಬರೂ ಮನೆಯೊಳಗೆ ನಡೆದರು.ಯಶೋಧಳಿಗೆ ಯಾರು ನಮ್ಮ ಮಂಗಳನ್ನು ಮದುವೆಯಾಗೊ ಹುಡುಗ ಅನ್ನೋದೆ ಅನುಮಾನ,ರಾಘವ ಕೂಡ ಮದುಮಗನ ಮುಖ ಕಂಡವನಲ್ಲ ಎಲ್ಲದಕ್ಕೂ ಉತ್ತರಿಸಲು ಆಗಲೆ ರಾಘವನ ಗೆಳೆಯ ಮನೆಯೊಳಗೆ ಬಂದೇಬಿಟ್ಟ.ಇನ್ನೇನು ಮಂಗಳ ಚಾ ಹಿಡಿದುಕೊಂಡು ಬರುವ ಸಮಯ ಬಂದೇಬಿಟ್ಟಿತು.ತಲೆಬಾಗಿ ನಾಚಿಕೆಯಿಂದ ಮದುಮಗಳಂತೆ ಮಿನುಗುತ್ತಾ ಒಳಗಿನಿಂದ ಬಂದ ಮಂಗಳಳನ್ನು ನೋಡಿದ ಮಿಥುನ್ ನಸುನಗು ಬೀರಿದರೆ ಅವನ ಆಪ್ತ ಮಿತ್ರ ಕಲ್ಲಾಗಿಯೆ ಬಿಟ್ಟ……..?
(ಮುಂದುವರಿಯುವುದು)













