
ನವದೆಹಲಿ: ಇಂದು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯ 18ನೇ ಕಂತನ್ನು ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಲಿದ್ದು ಹೀಗಾಗಿ ದೇಶಾದ್ಯಂತ ಸುಮಾರು 9.5 ಕೋಟಿ ರೈತರಿಗೆ ಕೇಂದ್ರ ಸರ್ಕಾರದಿಂದ ನವರಾತ್ರಿ ಕೊಡುಗೆ ಸಿಗಲಿದೆ.
ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2 ಸಾವಿರ ರೂ. ನೇರವಾಗಿ ಜಮೆಯಾಗಲಿದ್ದು ಈ ಕಂತಿನಲ್ಲಿ ಒಟ್ಟು 20,000 ಕೋಟಿ ರೂ.ಗಳನ್ನು ಸರ್ಕಾರ ರೈತರಿಗೆ ಪಾವತಿಸಲಿದೆ.













