28 C
Udupi
Saturday, April 25, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 15)

ಚೇತನ್ ವರ್ಕಾಡಿ

ಮತ್ತೆ ಸೌಂಧರ್ಯ ಡ್ಯಾಡಿ ಎಂದು ಕರೆಯುವ ಧ್ವನಿ ಸುಂದರರಾಯರಿಗೆ ಕೇಳಿಸಿತು.ತಿರುಗಿ ಮಗಳ ಹತ್ತಿರ ಹೋಗಿ ಏನಾಯ್ತು ಕಂದಾ! ಎಂದು ಪ್ರೀತಿಯಿಂದ ಮಗಳ ತಲೆಯನ್ನು ಸವರುತ್ತಾ ಕೇಳಿದಾಗ,ಸೌಂಧರ್ಯ‌ಳಿಂದ ಮಾತಿನ ಅಕ್ಷರಗಳು ಪದಮಾಲೆಯಾಗಿ ಹೊರಡಲು ಸಾಲುಗಟ್ಟಿ ನಿಂತಿತು.ಡ್ಯಾಡಿ ನನ್ಗೆ ಮಧು ಬೇಕು ಡ್ಯಾಡಿ! ಬೇರೆ ಏನು ನಿನ್ನತ್ರ ಕೇಳಲ್ಲ ಮಧೂನ ನನ್ಗೆ ಕೊಟ್ಟುಬಿಡು ಡ್ಯಾಡಿ ಹೀಗೆ ಹುಚ್ಚಿಯಂತೆ ಮಧುವಿನ ಧ್ಯಾನದಲ್ಲೆ ಮಗ್ನಳಾದ ಸೌಂಧರ್ಯ‌ಳ ಮಾತುಗಳು ಸುಂದರರಾಯರಿಗೆ ವಿಚಿತ್ರ‌ವಾಗಿ ಕಂಡಿತು.ಮನಸ್ಸಿನಲ್ಲಿ ಮತ್ತೊಂದು ಹೆದರಿಕೆಯು ಹುಟ್ಟಲಾರಂಭಿಸಿತು!ಒಂದು ವೇಳೆ ಮಧು ಸಿಗದಿದ್ದಲ್ಲಿ ಸೌಂಧರ್ಯ ಹುಚ್ಚಿಯಾಗಿಬಿಟ್ಟರೆ!ಅಯ್ಯೋ ಅಯ್ಯೋ ಆ ರೀತಿ ಆದರೆ ನಾನಂತೂ ಕಂಡಿತ ಬದುಕಿರಲಾರೆ ಏನಾದರೂ ಮಧುವನ್ನು ಒಪ್ಪಿಸಿ ಸೌಂಧರ್ಯ‌ಳಿಗೆ ಮದುವೆ ಮಾಡೋದೆ ತಂದೆಯಾಗಿ ತಾನು ಮಾಡಬೇಕಾದ ಮೊದಲ ಕೆಲಸವೆಂದು ಭಾವಿಸಿ! ಮಧು ಯಾವತ್ತಿದ್ದರೂ ನಿನ್ನ ಅರಸನೆ ಕಂದ ಎಂದು ಮಗಳನ್ನು ಸಮಧಾನಿಸಿ ತನ್ನ ರೂಮಿನ ಕಡೆ ಹೆಜ್ಜೆ ಹಾಕಿದ.
ಸೌಂಧರ್ಯ‌ಳಿಗೆ ತನ್ನ ತಂದೆಯ ಮಾತುಗಳನ್ನು ಕೇಳಿ ಕೊಂಚ ಸಮಧಾನವೆನಿಸಿ ನಿದ್ದೆಯ ಕಣ್ಣಿಗೆ ಕೆಲಸವನ್ನು ಕೊಟ್ಟು ನಾಳಿನ ಶುಭದಿನಕ್ಕೆ ಕಾಯಲಾಂಭಿಸಿದಳು….
ಮಂಗಳಲ ಮನೆಯಲ್ಲಿ ಸಡಗರ ಸಂಭ್ರಮದ ದಿನವದು!ಹೌದು ಮುದ್ದಿನ ಮಗಳನ್ನು ನೋಡಲು ದೂರದ ಊರಿನಿಂದ ಯುವಕನೊಬ್ಬ ಬರುವ ದಿನ ಅದಾಗಿತ್ತು. ರಾಘವ ಮತ್ತು ಯಶೋಧಳ ಖುಷಿ‌ಯನ್ನು ಪದಗಳಲ್ಲಿ ವಿವರಿಸಲಾಗದು,ಮನೆಯ ಅಂಗಳ ಬಾಗಿಲುಗಳು ತೋರಣಕಟ್ಟಿ ಹೊಸ ಅತಿಥಿ‌ಯಾಗಿ ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದೆ..

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page