29.1 C
Udupi
Saturday, April 25, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 13)

ಚೇತನ್ ವರ್ಕಾಡಿ

ಸೌಂಧರ್ಯಳಿಗೊಂದು ಕೆಟ್ಟ ಕನಸು ಹುಟ್ಟಿಯೆ ಬಿಟ್ಟಿತು.ಮಧು ಮತ್ತು ಒಬ್ಬಳು ಸುಂದರ ಯುವತಿಯೊಬ್ಬಳು ಪಾರ್ಕ್ ಒಂದರಲ್ಲಿ ಕುಳಿತು ಪ್ರೇಮಸಲ್ಲಾಪದಲ್ಲಿ ತೊಡಗಿದ್ದರು.ಸೌಂಧರ್ಯ ಆ ದಾರಿಯಾಗಿ ಕಾರಿನಲ್ಲಿ ಪ್ರಯಣಿಸುತ್ತಿದ್ದಳು.ಏನೊ ಸಡನ್ನಾಗಿ ಪಾರ್ಕ್‌ನ ಕಡೆ ಕಣ್ಣುಹಾಯಿಸಬೇಕಾದರೆ ಮಧುವನ್ನು ದೂರದಿಂದ‌ಲೆ ಕಂಡವಳೆ ಕಾರನ್ನು ಸೀದಾ ಪಾರ್ಕ್‌ನ ಕಡೆ ತಿರುಗಿಸಿ ಬರಬೇಕಾದರೆ ಮಧುವಿನ ಪ್ರೇಮಬಂಧನದಲ್ಲಿ ಬೇರೆ ಹುಡುಗಿಯೊಬ್ಬಳು ಪ್ರವೇಶಿಸಿದ್ದಳು.ಕೋಪದಿಂದ ಕಾರನ್ನು ನಿಲ್ಲಿಸಿದವಳೆ ಹುಚ್ಚಿಯಂತಾಗಿದ್ದ ಸೌಂಧರ್ಯ ಸೀದಾ ಮಧುವಿನ ಕಡೆ ಬರುತ್ತಿದ್ದರೂ ಏನೂ ತಿಳಿಯದವನಂತೆ ತನ್ನ ಪ್ರೇಯಸಿಯ ಜೊತೆ ಮಾತಿನ ಜುಗುಲ್ ಬಂದಿಯೊಳಗೆ ಬಂದಿಯಾಗಿದ್ದ.ಇದನ್ನೆಲ್ಲ ಸಹಿಸಲಾರದ ಸೌಂಧರ್ಯ ನನಗೆ ಸಿಗದ ನೀನು ಇವಳಿಗೂ ಸಿಗಬಾರದೆಂದು ಮಧುವಿಗೆ ತಿಳಿಯದಂತೆ ಹತ್ತಿರದಲ್ಲಿದ್ದ ಕಲ್ಲೊಂದನ್ನು ಎತ್ತಿ ಹಿಂದಿನಿಂದ ಬಂದು ಮಧುವಿನ ತಲೆಗೆ ಹಾಕಿಯೆ ಬಿಟ್ಪಳು…ರಕ್ತ ಚಿಲ್ಲೆಂದು ಚಿಮ್ಮಿ ಓಕುಳಿಯಂತಾಯಿತು..ಒಂದು ಕ್ಷಣದ ಆಲೋಚನೆಯಲ್ಲಿ ಏನೇನೊ ಆಗಿಹೋಯಿತು.ಇದೆಲ್ಲಾ ನಡೆದು ಕ್ಷಣಕಳೆದುಕೆಳಗಡೆ ನೋಡಬೇಕಾದರೆ ಮಧುವಿನ ಪ್ರಾಣಪಕ್ಷಿಯೆ ಹಾರಿಹೋಗಿತ್ತು.ಇದನ್ನು ನೋಡಿದ ಸೌಂಧರ್ಯ ಅಮ್ಮಾ ಎಂದು ಧ್ವನಿ‌ಯೆಬ್ಬಿಸಬೇಕಾದರೆ….

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page