50 ಕನ್ನಡ ಮಾಧ್ಯಮ ಶಾಲೆಗಳ 2500 ವಿದ್ಯಾರ್ಥಿಗಳಿಗೆ ಕೊಡೆ ಮತ್ತು ನೋಟ್ ಬುಕ್ ಪುಸ್ತಕ ವಿತರಣೆ

ಕಾರ್ಕಳ :ಬೋಳ ಸುರೇಂದ್ರ ಕಾಮತ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಕಾರ್ಕಳ ಟೈಗರ್ಸ್, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಕಳ ತಾಲೂಕಿನ 50 ಕನ್ನಡ ಮಾಧ್ಯಮ ಶಾಲೆಗಳ 2500 ವಿದ್ಯಾರ್ಥಿಗಳಿಗೆ ಕೊಡೆ ಮತ್ತು ನೋಟ್ ಬುಕ್ ಪುಸ್ತಕ ವಿತರಣೆ ಕಾರ್ಯಕ್ರಮವು ಜೂನ್ 13ರಂದು ಅಂಡಾರು ವಿಠಲ ರುಕ್ಮಿಣಿ ಕಿಣಿ ಸಾಂಸ್ಕೃತಿಕ ಸಭಾಭವನ, ಎಸ್ ವಿ ಟಿ ಮಹಿಳಾ ಕಾಲೇಜು ಬಳಿ ನಡೆಯಲಿದೆ.