
ಚೆನ್ನೈ: ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದು ಸ್ಥಾನವನ್ನೂ ಗೆಲ್ಲಲು ಬಿಜೆಪಿ ವಿಫಲವಾದ ಬೆನ್ನಲ್ಲೇ ಒಂದು ತಿಂಗಳ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಅಣ್ಣಾಮಲೈ ಅವರಿಗೆ ಲಂಡನ್‌ನಲ್ಲಿ ‘ಚೆವೆನಿಂಗ್ ಗುರುಕುಲ್ ಫೆಲೋಶಿಪ್ ಫಾರ್ ಲೀಡರ್‌ಶಿಪ್ ಆ್ಯಂಡ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಫೆಲೋಶಿಪ್ ದೊರೆತಿದ್ದು, ಅವರು ಸದ್ಯದಲ್ಲೇ ಬ್ರಿಟನ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಹೈಕಮಾಂಡ್ ಜೊತೆಯೂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.