
ಬರೀ 100 ಗ್ರಾಂ ಹೆಚ್ಚುವರಿ ತೂಕದಿಂದ ಒಲಂಪಿಕ್ಸ್ ಫೈನಲ್ ನಿಂದ ಹೊರಬಿದ್ದ ವಿನೇಶ್ ಪೋಗಟ್ ನ ನೋವಿನ ಕತೆಗೆ ಪ್ರಧಾನಿ ಮೋದಿ ಮಾತ್ರವಲ್ಲದೆ ಭಾರತೀಯರೆಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಆದರೆ ಆಕೆಯ ಶ್ರಮಕ್ಕಾಗಿ ಬೆಳ್ಳಿಯ ಪದಕವಾದರೂ ಕೈ ಸೇರಲಿದೆ ಎಂಬುದು ನಮ್ಮೆಲ್ಲರ ಆಶಯವಾಗಿದ್ದು ಇಂದು ಅವರ ಆ ಭವಿಷ್ಯ ನಿರ್ಧಾರವಾಗಲಿದೆ.
ವಿನೇಶ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು ಬಹುತೇಕರಿಗೆ ಬೆಳ್ಳಿಯ ಪದಕ ಆಕೆಯ ಕೈಸೇರುತ್ತಾ ಎಂಬ ಕುತೂಹಲವಿದೆ. ಭಾರತದ ಕಾಲಮಾನದ ಪ್ರಕಾರ ರಾತ್ರಿ 9.30ಕ್ಕೆ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ತೀರ್ಪು ಪ್ರಕಟಿಸಲಿದ್ದು ಪೋಗಾಟ್ ಪರ ಹರೀಶ್ ಸಾಳ್ನೆ ಸೇರಿ ನಾಲ್ಕು ವಕೀಲರು ವಾದ ಮಂಡಿಸಲಿದ್ದಾರೆ.
ಘಟನೆಯ ಹಿನ್ನೆಲೆ:
ವಿನೇಶ್ ಫೋಗಟ್ ಅವರು ಈ ಬಾರಿಯ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ಪಂದ್ಯದಲ್ಲಿ ಫೈನಲ್ ತಲುಪಿದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದು ಆದರೆ ಹೆಚ್ಚುವರಿ 100 ಗ್ರಾಂ ತೂಕ ಜಾಸ್ತಿ ಇದ್ದ ಕಾರಣ ವಿನೇಶ್ ಫೋಗಟ್ ಅವರು ರಾತ್ರಿ ಇಡೀ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್, ಜಾಗಿಂಗ್, ಸ್ಕಿಪ್ಪಿಂಗ್ ಹೀಗೆ ತೂಕ ಇಳಿಸಿಕೊಳ್ಳಲು ವಿನೇಶ್ ಫೋಗಟ್ ಅವರು ಅತಿಯಾದ ದೈಹಿಕ ಕಸರತ್ತು ಮಾಡಿದ್ದಾರೆ. ವ್ಯಾಯಾಮದಿಂದ ಸುಸ್ತಾಗಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೇಹದಲ್ಲಿ ನೀರಿನ ಅಂಶದ ಕೊರತೆಯಿಂದ ಅಸ್ವಸ್ಥರಾಗಿದ್ದಾರೆ. ಡಿಹೈಡ್ರೇಷನ್ನಿಂದ ಆಸ್ಪತ್ರೆಗೆ ದಾಖಲಾಗಿದ್ದು ಅತ್ತ ಪಂದ್ಯದಿಂದ ಅನರ್ಹಗೊಂಡರು.













