
ಬಂಗಾಳಕೊಲಿಯಲ್ಲಿ ಅರ್ನಬ್ ಚಂಡಮಾರುತ ಕಾರಣ ಇಂದು ಆಂಧ್ರಪ್ರದೇಶದ ಗಡಿಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಂಡಮಾರುತದ ಕಾರಣ ಸಂಚರಿಸುವ ರೈಲುಗಳು ಮತ್ತು ವಿಮಾನ ಸೇವೆಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದೆ. ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಚಳಿಯ ವಾತಾವರಣವಿರಲಿದೆ. ರಾಜ್ಯದಲ್ಲಿ ನವಂಬರ್ 2 ಮತ್ತು 3ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.






















