
ಬಾಲ್ಟಿಮೋರ್ ಮೂಲದ ಪಾಕಿಸ್ತಾನಿ-ಅಮೆರಿಕನ್ ಉದ್ಯಮಿ ಸಾಜಿದ್ ತರಾರ್ ಮೋದಿ ಅವರು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಬಲ ನಾಯಕ. ಮೋದಿ ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಒಳ್ಳೆಯದು. ಪಾಕಿಸ್ತಾನಕ್ಕೂ ಅವರಂತಹ ನಾಯಕ ಸಿಗಲಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸಹಜ ನಾಯಕ. ಇವರು ಪಾಕಿಸ್ತಾನಕ್ಕೆ ಸಂಕಷ್ಟ ಬಂದಾಗ ಭೇಟಿ ನೀಡಿದ್ದಾರೆ. ಎಲ್ಲ ರಾಜಕೀಯ ಗೊಂದಲಗಳನ್ನು ಬಿಟ್ಟು ನಮ್ಮ ದೇಶದ ಜತೆಗೆ ಮಾತುಕತೆ ಮತ್ತು ವ್ಯಾಪಾರವನ್ನು ಪ್ರಾರಂಭಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಸಾಜಿದ್ ತರಾರ್ ಹೇಳಿದ್ದಾರೆ.
ಮೋದಿ ಅವರ ಜನಪ್ರಿಯತೆಯನ್ನು ಅನೇಕ ಸಂದರ್ಭದಲ್ಲಿ ನಾನು ಕಂಡಿದ್ದೇನೆ. ಭಾರತ ಈಗಾಗಲೇ ಅಭಿವೃದ್ಧಿಯಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವ ಜಗತ್ತಿನ ಜನರಿಗೆ ಮಾದರಿಯಾಗಲಿದ್ದಾರೆ ಎಂದಿದ್ದಾರೆ.