33.1 C
Udupi
Sunday, April 26, 2026
spot_img
spot_img
HomeBlog“ಪ್ರಥಮ ಹೆಜ್ಜೆ ಸಕಾರಾತ್ಮಕ ಚಿಂತನೆಗಳ ಜೊತೆಯಾಗಲಿ” ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ,ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ...

“ಪ್ರಥಮ ಹೆಜ್ಜೆ ಸಕಾರಾತ್ಮಕ ಚಿಂತನೆಗಳ ಜೊತೆಯಾಗಲಿ” ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ,ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಗುರುಪ್ರಸಾದ್ ಭಟ್

ಕಾರ್ಕಳ : ಪ್ರಗತಿಯ ನಿರ್ಧಾರ ಬದುಕಿಗೆ ಸ್ಫೂರ್ತಿ, ವಿದ್ಯಾಸಂಸ್ಥೆಯಲ್ಲಿ ಪ್ರಥಮ ಹೆಜ್ಜೆಯನ್ನಿರಿಸಿದ ವಿದ್ಯಾರ್ಥಿಗಳ ಚಿಂತನೆಗಳು ಸಕಾರಾತ್ಮಕವಾಗಿರಲಿ, ಮುಂದಿನ ಗುರಿಯತ್ತ ಚಿತ್ತೈಸಿ,ಶಿಕ್ಷಣದ ಆಯ್ಕೆ ನ್ನು ಸಮರ್ಥವಾಗಿ ನೆರವೇಸಿಕೊಂಡಾಗ ಅದರೊಂದಿಗೆ ಜವಾಬ್ದಾರಿಗಳನ್ನು ನಿರ್ವಹಿಸುವ ಹಾಗೂ ಪ್ರಬುದ್ದರಾಗಿ ಮುನ್ನಡೆವ ಮನಸ್ಥಿತಿಯ ಜೊತೆಗೆ ಹೆತ್ತವರಿಗೆ ಹೊರೆಯಾಗದೆ, ಶಿಕ್ಷಣ ಸಂಸ್ಥೆಗೆ ಯಾವುದೇ ರೀತಿಯ ಸಮಸ್ಯೆಯಾಗದೆ ಪರಿಪೂರ್ಣವಾದ ಆದರ್ಶ ವಿದ್ಯಾರ್ಥಿಯಾಗಿ ಮುನ್ನಡೆಯಬೇಕಿದೆ, ನಿತ್ಯ ನಿರಂತರ ಕರ್ತವ್ಯ ಪ್ರಜ್ಞೆಯೊಂದಿಗೆ ಮುನ್ನಡೆದರಷ್ಟೇ ಬದುಕು ಯಶಸ್ವೀ ನಾಳೆಗಳನ್ನು ಕಾಣಲು ಸಾಧ್ಯ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಾರ್ಕಳ ಇಲ್ಲಿ ಸೋಮವಾರ ನಡೆದ ಇಂಡಕ್ಷನ್ ಪ್ರೋಗ್ರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕೆ ಗುರುಪ್ರಸಾದ್ ಭಟ್ ಅವರು ಉದ್ಘಾಟನ ನುಡಿಗಳನ್ನಾಡುತ್ತ ಮಕ್ಕಳನ್ನು ಹುರಿದುಂಬಿಸಿದರು.

ಶಿಕ್ಷಣವನ್ನು ಮನಸ್ಸಿಗೆ ಮಾತ್ರವಲ್ಲ ಹೃದಯಕ್ಕೂ ತುಂಬಿಸಿಕೊಳ್ಳಬೇಕು ಎಂಬ ಗ್ರೀಕ್ ತತ್ವಜ್ಞಾನಿಯ ಮಾತಿನಂತೆ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯಗುಣ ಸಂಪನ್ನರಾಗಿ ಮುನ್ನಡೆಯಬೇಕಿದೆ ಎಂದು ಸಂಸ್ಥೆಯ ದಾಖಲಾತಿ ಸಂಯೋಜಕರಾದ ಚಿತ್ರ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಸಂಸ್ಥೆಗೆ ದಾಖಲಾದ ದಿನದಿಂದ ಹಾಜರಾತಿಯ ಕಡೆಗೆ ವಿಶೇಷ ಗಮನ ಹರಿಸಬೇಕು, ಶಿಸ್ತುಬದ್ಧ ಜೀವನ ಕ್ರಮದಿಂದಷ್ಟೇ ಪರಿಪೂರ್ಣ ಅಂಕಗಳಿಕೆಗೆ ಅವಕಾಶವಾಗುತ್ತದೆ, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅವಲೋಕಿಸಬೇಕಿದೆ, ಎಂದು ಸಂಸ್ಥೆಯ ಇಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್ ವಿಭಾಗದ ವಿಬಾಗಾಧಿಕಾರಿ ಪವಿತ್ರ. ಎಸ್ ವಿವರಿಸಿದರು.
ಮೆಕ್ಯಾನಿಕಲ್ ವಿಭಾಗಾಧಿಕಾರಿ ಪುನೀತ್ ಎನ್ ಮಾತನಾಡುತ್ತಾ ವಿದ್ಯಾರ್ಥಿಗಳು ಗುಂಪು ಘರ್ಷಣೆಗಳಿಂದ ದೂರವಿದ್ದು ಜ್ಞಾನದ ಹಸಿವನ್ನು ಹೆಚ್ಚಿಸಿಕೊಂಡು ಮುನ್ನಡೆಯಿರಿ ಎಂದು ಕರೆಕೊಟ್ಟರು.
ವಿದ್ಯಾರ್ಥಿ ಪಾಲಕರಾದ ರೇಷ್ಮಾ ಶೆಟ್ಟಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅತ್ಯುತ್ತಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಭವಿಷ್ಯದಲ್ಲಿ ದೃಢ ನಿರ್ಧಾರದೊಂದಿಗೆ ಸಂಸ್ಕಾರ ವಂತರಾಗಿ, ವಿದ್ಯೆ ವಿನಯತೆಗಳನ್ನು ಮಸಿಗೂಡಿಸಿಕೊಳ್ಳಿ, ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಪ್ರಾ0ಶುಪಾಲರಾದ ಶ್ರೀ ಕುಮಾರ್ ಕೆ ವಿದ್ಯಾರ್ಥಿಗಳಿಗೆ, ದುಶ್ಚಟಗಳ ಅಥವಾ ಮೊಬೈಲ್ ಬಳಕೆಯ ದಾಸರಾಗಬೇಡಿ ಅದೆಂದಿಗೂ ನಿಮ್ಮ ಬದುಕನ್ನು ಉನ್ನತೀಕರಿಸದು ಬದಲಾಗಿ ಭವಿಷ್ಯದ ನಾಶಕ್ಕೆ ಕಾರಣವಾದೀತು ಎಂದು ಕರೆ ಕೊಟ್ಟರು ಶಿಕ್ಷಣದೊಂದಿಗೆ ಪೂರಕ ವಾತಾವರಣವಿರುವುದರಿಂದ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗಾಧಿಕಾರಿ ಮಲ್ಲಿಕಾ ಕೆ ನಿರೂಪಿಸಿ,ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿ,ಗುಣಪಾಲ್ ಜೈನ್ ಪ್ರಾಸ್ತಾವಿಸಿ ಸಂಸ್ಥೆಯ ವಿದ್ಯಾರ್ಥಿ ವಿಜಯ್ ಆಚಾರ್ಯ ಪ್ರಾರ್ಥಿಸಿ ಸಿವಿಲ್ ವಿಭಾಗದ ಪ್ರಿಯ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page