
ಕಾರ್ಕಳ :ಪ್ರತಿಷ್ಠಿತ ಕಾರ್ಕಳ ವಕೀಲರ ಸಂಘದ 2025 -26 ಮತ್ತು 26-27 ರ ಸಾಲಿನ ಪದಾಧಿಕಾರಿಗಳಿಗೆ ನಡೆದ ಚುನಾವಣೆಯಲ್ಲಿ ಹಿರಿಯ ನ್ಯಾಯವಾದಿ ಪ್ರಕಾಶ್ ಆಚಾರ್ ಅಧ್ಯಕ್ಷರಾಗಿ. ಹರೀಶ್ ಅಧಿಕಾರಿ ಉಪಾಧ್ಯಕ್ಷರಾಗಿ. ಪದ್ಮಪ್ರಸಾದ್ ಜೈನ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಬ್ನಮ್ ಖಾನ್ ಜತೆ ಕಾರ್ಯ ದರ್ಶಿಯಾಗಿ ಮತ್ತು ವಿನುಷಾ ಶೆಟ್ಟಿ ಖಜಾಂಚಿಯಾಗಿ ಆಯ್ಕೆಯಾಗಿರುತ್ತಾರೆ.
ಚುನಾವಣಾಧಿಕಾರಿ ಸನತ್ ಕುಮಾರ್ ಜೈನ್ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಹಿರಿಯ ನ್ಯಾಯವಾದಿಗಳಾದ ಶ್ರೀ ಎಮ್.ಕೆ..ವಿಜಯಕುಮಾರ್ , ವಿಜಯರಾಜ್ ಶೆಟ್ಟಿ, ಶೇಖರ್ ಮಡಿವಾಳ್ ,ರವೀಂದ್ರ ಮೊಯ್ಲಿ, ನವೀನ್ ಚಂದ್ರ ಹೆಗ್ಡೆ,ಮತ್ತಿತರರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.













