
ವಿದ್ಯಾರ್ಥಿಗಳು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಹಾಡು, ಜೋಕ್ಸ್, ಡೈಲಾಗ್ ಹೀಗೆ ಉತ್ತರಗಳನ್ನು ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿ ನಗೆಪಾಟಲಾಗಿದೆ. ಇದೀಗ ಇಂತಹದ್ದೇ ಒಂದು ಘಟನೆ ಭಾರಿ ವೈರಲ್ ಆಗುತ್ತಿದೆ. ಪರೀಕ್ಷೆಯಲ್ಲಿ ಹೃದಯದ ರೇಖಾ ಚಿತ್ರ ಬಿಡಿಸಿ ಹೃದಯದ ಕೋಣೆಗಳು ಹಾಗೂ ಅವುಗಳ ಕಾರ್ಯಗಳನ್ನು ವಿವರಿಸಲು ಸೂಚಿಸಿ ಎಂಬ ಪ್ರಶ್ನೆಗೆ ವಿದ್ಯಾರ್ಥಿ ಹೃದಯದ ಚಿತ್ರ ಬಿಡಿಸಿ ತನ್ನ ಕ್ರಶ್ ಹೆಸರು ಬರೆದು ಅವರ ಕಾರ್ಯಗಳನ್ನು ಬರೆದಿದ್ದಾನೆ.
ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ಬಹುತೇಕರು ಇದು ನಕಲಿ. ಎಲ್ಲರಿಗೂ ವಿಡಿಯೋ ವೈರಲ್ ಮಾಡುವ ಗೀಳು ಹೆಚ್ಚಾಗಿದ್ದು ಇದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಸುಂದರವಾಗಿ ಹೃದಯದ ರೇಖಾ ಚಿತ್ರ ಬಿಡಿಸಲಾಗಿದೆ. ಹೃದಯ ರೇಖಾ ಚಿತ್ರದಲ್ಲಿ ಪ್ರತಿ ಅಂಶಗಳನ್ನು ಚಿತ್ರಿಸಲಾಗಿದೆ. ಇಷ್ಟು ನೆನಪಿನಲ್ಲಿರುವ ವಿದ್ಯಾರ್ಥಿಗೆ ಕೋಣೆಗಳ ನೆನಪೂ ಇರಲಿದೆ. ಈ ರೀತಿಯ ಹುಡುಗಿಯರ ಹೆಸರು ಬರೆಯುವ ಧೈರ್ಯ ಈ ಶಾಲಾ ಮಟ್ಟದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೋರಿಸುವುದಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಸ್ಟೂಡೆಂಟ್ ರಾಕ್ಸ್, ಟೀಚರ್ ಶಾಕ್ಸ್ ಎಂದು ಕಮೆಂಟ್ ಮಾಡಿದ್ದಾರೆ.