28.4 C
Udupi
Monday, April 27, 2026
spot_img
spot_img
HomeBlogಪಟಾಕಿ ತ್ಯಜಿಸಿ ಇಲ್ಲವೇ ,ಹಸಿರು ಪಟಾಕಿ ಮಾತ್ರ ಬಳಸಿ: ಸಚಿವ ಈಶ್ವರ್ ಖಂಡ್ರೆ ಮನವಿ

ಪಟಾಕಿ ತ್ಯಜಿಸಿ ಇಲ್ಲವೇ ,ಹಸಿರು ಪಟಾಕಿ ಮಾತ್ರ ಬಳಸಿ: ಸಚಿವ ಈಶ್ವರ್ ಖಂಡ್ರೆ ಮನವಿ

ಬೆಳಗಿನ ಹಬ್ಬ ದೀಪಾವಳಿ ಆಚರಣೆಯ ವಿಚಾರ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ವಿಡಿಯೋ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಾಯುಮಾಲಿನ್ಯ ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಮತ್ತು ಹಿರಿಯ ನಾಗರಿಕರ ಮತ್ತು ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಟಾಕಿಗಳನ್ನು ತ್ಯಜಿಸಿ ಇಲ್ಲವೇ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ. ಪಟಾಕಿ ಸಿಡಿಸುವುದರಿಂದ ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ. ಇನ್ನು ಪುಟ್ಟ ಮಕ್ಕಳು ಪಟಾಕಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಘಟನೆಗಳು ವರದಿಯಾಗುತ್ತವೆ ಈಗಾಗಿ ಸಾಧ್ಯವಾದಷ್ಟು ಪಟಾಕಿ ಬಳಸಬರುವುದೇ ಉತ್ತಮ. ಇನ್ನು ಹಸಿರು ಪಟಾಕಿ ಬಳಸುವುದಾದರೂ ಕೂಡ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನು ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನು ಮಾತ್ರ ದಾಸ್ತಾನು ಸಾಗಾಟ ಮತ್ತು ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ. ಒಂದು ವೇಳೆ ನಿಯಮ ಮೀರಿದ್ದಲ್ಲಿ ಮುಂದಿನ ವರ್ಷ ಪಟಾಕಿ ಮಳಿಗೆಗೆ ಅನುಮತಿ ನೀಡದಂತೆ ತಿಳಿಸಲಾಗಿದೆ. ಇನ್ನು ಸಂಘ-ಸಂಸ್ಥೆಗಳು ,ಶಿಕ್ಷಕರು, ಉಪನ್ಯಾಸಕರು, ಜನಪ್ರತಿನಿಧಿಗಳು ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page