29.2 C
Udupi
Tuesday, May 5, 2026
spot_img
spot_img
HomeBlogನೀವೇನು ಭಿಕ್ಷುಕರಲ್ಲ.. ದಯಾಮರಣ ಯಾಕೆ ಕೇಳ್ತೀರಾ: ಎಚ್ ಡಿ ಕುಮಾರಸ್ವಾಮಿ

ನೀವೇನು ಭಿಕ್ಷುಕರಲ್ಲ.. ದಯಾಮರಣ ಯಾಕೆ ಕೇಳ್ತೀರಾ: ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಯೋನಿಕ್ಸ್ ವೆಂಡರ್ಸ್ಗಳಿಂದ ದಯಾ ಮರಣಕ್ಕೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ ಎಂದು ಕರೆ ನೀಡಿದ್ದಾರೆ.

18 ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವನಿಗೆ ಏನ್ ಬೇಕೋ ಕ್ರಮ ಮಾಡಿ. ಜನಪ್ರತಿನಿಧಿಗಳ ಅಕ್ರಮ ಮಾಡಿದ್ರೆ ಅವರ ಮೇಲೆ ಆಕ್ಷನ್ ತಗೊಳ್ಳಿ. ತನಿಖೆ ನಡೆಸಿ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು? ವರ್ಷಗಳೇ ಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.

ಗುತ್ತಿಗೆದಾರರೇ ಒಂದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರದಲ್ಲಿ ಸಾರ್ವಜನಿಕರ ಹಣ ಲೂಟಿ ಆಗ್ತಿದೆ. ಗುತ್ತಿಗೆದಾರರು ಈ ರಾಜ್ಯ ಉಳಿಸಬೇಕು ಅಂತ ಇದ್ದರೆ, ಗುತ್ತಿಗೆದಾರರಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಗುತ್ತಿಗೆದಾರರು ಯಾರು ಕೆಲಸ ಮಾಡಬೇಡಿ. ಈ ಸರ್ಕಾರದವರು ಅಂಧ್ರದವರನ್ನೋ ಯಾರನ್ನ ಕರೆದುಕೊಂಡು ಮಾಡಿಸಿಕೊಂಡು ಬರ್ತಾರೋ, ಪ್ಯಾಕೇಜ್ ಕೊಟ್ಟು ಮಾಡಿಸ್ತಾರೋ ನೋಡೋಣ. ಬರಲಿ ಯಾರು ಬಂದು ಮಾಡ್ತಾರೋ ಮಾಡಲಿ. ಗುತ್ತಿಗೆದಾರರಿಗೆ ಕೈ ಜೋಡಿಸಿ ಮನವಿ ಮಾಡ್ತೀನಿ. ನೀವು ನಿಮ್ಮಲ್ಲಿ ಗುಂಪು ಮಾಡಿಕೊಂಡು, ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನೆ ಉಪಯೋಗ ಮಾಡಿಕೊಳ್ತಾರೆ. ಇದೆಲ್ಲ ಕ್ಲೀನ್ ಆಗಬೇಕಾದ್ರೆ ಒಂದು ವರ್ಷ ಯಾರು ಗುತ್ತಿಗೆ ತೆಗೆದುಕೊಳ್ಳಬೇಡಿ.

ದಯಾ ಮರಣಕ್ಕೆ ಯಾಕೆ ಅರ್ಜಿ ಹಾಕ್ತೀರಾ? ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ. ನೀವು ತಪ್ಪು ಮಾಡಿದ್ದೀರಾ? ತಪ್ಪು ಮಾಡಿರೋದು ಈ ಸರ್ಕಾರ. ಅದರ ವಿರುದ್ಧ ದೃಢ ನಿರ್ಧಾರ ಮಾಡಿ ಹೋರಾಟ ಮಾಡಿ. ನೀವೇನು ಭಿಕ್ಷುಕರಲ್ಲ. ಕೆಲಸ ಮಾಡಿದ್ದೀರಾ ಹಣ ಕೇಳ್ತಿದ್ದೀರಾ. ಅದಕ್ಕೆ ಯಾಕೆ ದಯಾ ಮರಣ ಕೇಳ್ತೀರಾ. ಪ್ರಾಮಾಣಿಕವಾಗಿ ಕೆಲಸ ಮಾಡದೆ ಬಿಲ್ ಮಾಡಿ ಹಣ ಹೊಡೆದಿರೋರು ಇದ್ದಾರೆ. ಅಧಿಕಾರಿಗಳು, ದೊಡ್ಡ ದೊಡ್ಡ ಗುತ್ತಿಗೆದಾರರು ಕೆಲಸವೇ ಮಾಡದೇ ಹಣ ಮಾಡಿರೋದು ಇದ್ದಾರೆ. ನೀವು ಕೆಲಸ ಮಾಡಿದ್ದೀರಾ. ಯಾಕೆ ಆತ್ಮಹತ್ಯೆ ಮಾಡಿಕೊಳ್ತೀರಾ?. ಹಣ ಬರೋವರೆಗೂ ಯಾರು ಗುತ್ತಿಗೆ ವಹಿಸಿಕೊಳ್ಳದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಸಲಹೆ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page