
ಗೊರೂರು : ನಿತ್ಯ ನಿರಂತರ ಜೀವನಕ್ರಮಗಳ ಜಂಜಾಟದಲ್ಲಿ ಮನುಷ್ಯ ಕೇವಲ ಹಣಗಳಿಕೆಯ ಮಿಷನರಿಯಾಗಿ ದುಡಿಯುತ್ತಿದ್ದಾನೆ ವಿನಹಾ ಹಣಗಳಿಕೆಯ ಜೊತೆಗೆ ಆರೋಗ್ಯ ಗಳಿಕೆಯ ಮಾರ್ಗೋಪಾಯಗಳನ್ನು ಮರೆಯುತ್ತಿದ್ದಾನೆ ಆರೋಗ್ಯವೇ ಭಾಗ್ಯ ಎಂಬ ನಮ್ಮ ಹಿರಿಯರ ಮಾತುಗಳನ್ನು ಯಾಕೋ ಇಂದಿನ ಆಧುನಿಕ ದಿನಮಾನಗಳಲ್ಲಿ ಎಲ್ಲರೂ ಮರೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಆದರೆ ಮನುಷ್ಯ ಆರೋಗ್ಯವಂತನಾಗಿ ಸದೃಢನಾಗಿ ಬದುಕ ಬೇಕೆಂದರೆ ಆತನಿಗೆ ಮುಖ್ಯವಾಗಿ ದೈಹಿಕ ಸಮತೋಲನ ಕಾಯ್ದುಕೊಳ್ಳುವ ಆಹಾರ ಪದ್ಧತಿಯೊಂದಿಗೆ ನಿತ್ಯ ನಿರಂತರ ಯೋಗ,ಧ್ಯಾನ ಮುಂತಾದ ಆರೋಗ್ಯಕರ ಆಚಾರ ವಿಚಾರಗಳ ಬಗೆಗೆ ಅರಿವಿರಬೇಕು, ನಾವೂ ದಿನನಿತ್ಯ ಯೋಗಾಭ್ಯಾಸ ಮಾಡುತ್ತಾ ಆರೋಗ್ಯ ವೃದ್ಧಿಸಿಕೊಳ್ಳೋಣ ಎಂದು ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆ ಗೊರೂರು ಇಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಉದ್ಘಾಟಿಸಿ ಸಂಸ್ಥೆಯ ಮುಖ್ಯ್ಯೋಪಾಧ್ಯಯಾರಾದ ಶಭಾನ ಗೊರೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾ ವಿದ್ಯಾರ್ಥಿಗಳ ಬದುಕು ಯೋಗದೊಂದಿಗೆ ಸರಾಗವಾಗಲಿ,ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಯೋಗ ಅಧ್ಯಯನದಲ್ಲಿ ತೊಡಗಿದಾಗ ಬದುಕು ಆರೋಗ್ಯದಾಯಕವಾಗಿರುತ್ತದೆ, ವಿದ್ಯಾರ್ಥಿಗಳೆಲ್ಲರೂ ನಿತ್ಯ ಯೋಗ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕು ಎಂದು ಸಂಸ್ಥೆಯ ಶಿಕ್ಷಕರಾದ ನವೀನ್ ರಾಜ್ ಗೊರೂರು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರಾದ ಮಂಜುಳಾ ಗೊರೂರು, ಪೂಜಾ, ಸಬೀನಾ ಅವರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಾಂಭವಿ ಎಲ್ಲರನ್ನೂ ಸ್ವಾಗತಿಸಿ, ಸಮೀನಾ ಅಂಜು ಕಾರ್ಯಕ್ರಮ ನಿರೂಪಿಸಿ, ಜುಬೇದ ಎಲ್ಲರಿಗೂ ವಂದಿಸಿದರು, ಸಂಸ್ಥೆಯ ವಿದ್ಯಾರ್ಥಿಗಳಾದ ಶಿಖರ್ ಸದಾಶಿವ ಶೆಟ್ಟಿ ಹಾಗೂ ಗುರುಕಿರಣ್ ಅವರು ಎಲ್ಲಾ ಸಹಪಾಠಿಗಳಿಗೆ ಯೋಗ ತರಬೇತಿ ನೀಡಿದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಏಕಕಾಲದಲ್ಲಿ ಯೋಗನಿರತರಾದರು.