
‘ಸ್ವರ್ಣಾ ಪಾವಿತ್ರ್ಯ ರಕ್ಷಣೆ – ನಮ್ಮೆಲ್ಲರ ಹೊಣೆ’ ಎಂಬ ಆಶಯದಲ್ಲಿ 5ನೇ ವರ್ಷದ ‘ಸ್ವರ್ಣಾರತಿ’ ಕಾರ್ಯಕ್ರಮವು ದಿನಾಂಕ 14-01-2025 ರಂದು ಸಂಜೆ 6 ಗಂಟೆಯಿಂದ ಕಡಾರಿಯ ಸ್ವರ್ಣಾ ನದಿ ತೀರದಲ್ಲಿ ನೆರವೇರಲಿದೆ.
ಕಡಾರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಿಂದ ಸ್ವರ್ಣಾನದಿತೀರದವರೆಗೆ ಮೆರವಣಿಗೆ, ನದಿಪೂಜೆ, ದೀಪಾಲಂಕಾರ, ಸ್ವರ್ಣಾರತಿ ಕಾರ್ಯಕ್ರಮಗಳು ಜರುಗಿ, ನಂತರ ಸಭಾಕಾರ್ಯಕ್ರಮ ಹಾಗೂ ವಿಶೇಷ ಆಕರ್ಷಣೆಯಾಗಿ ಕುವೆಂಪು ವಿರಚಿತ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕೃತಿಯ ‘ಸುಬ್ಬಮ್ಮ’ ಪಾತ್ರದ ಭಾವಾಭಿವ್ಯಕ್ತಿ ನಡೆಯಲಿದೆ.
ಸರ್ವೋದಯ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ನೇತೃತ್ವದಲ್ಲಿ, ಮುಡಾರು-ಮಾಳ ಗ್ರಾಮಗಳ ಸ್ವರ್ಣಾರಾಧನ ಬಳಗದ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಾರ್ಕಳದ ಶಾಸಕರಾದ ವಿ. ಸುನೀಲ್ ಕುಮಾರ್ ಹಾಗೂ ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕ ಬಂಧುಗಳಿಗೆ, ಸ್ವರ್ಣಾಭಿಮಾನಿಗಳಿಗೆ ಈ ಮೂಲಕ ಆಮಂತ್ರಿಸಲಾಗಿದೆ.



















