24.6 C
Udupi
Sunday, March 16, 2025
spot_img
spot_img
HomeBlogದೆಹಲಿಯ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿತ ಹಿನ್ನೆಲೆ ಪ್ರಯಾಣಿಕರ ಸುರಕ್ಷತೆಗೆ 24/7 ವಾರ್ ರೂಮ್

ದೆಹಲಿಯ ವಿಮಾನ ನಿಲ್ದಾಣದ ಮೇಲ್ಚಾವಣಿ ಕುಸಿತ ಹಿನ್ನೆಲೆ ಪ್ರಯಾಣಿಕರ ಸುರಕ್ಷತೆಗೆ 24/7 ವಾರ್ ರೂಮ್

ದೆಹಲಿ: ಭಾರಿ ಮಳೆಯ ಹಿನ್ನೆಲೆಯಲ್ಲಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ಮೇಲ್ಚಾವಣಿ ಕುಸಿದ ದುರ್ಘಟನೆ ನಡೆದಿದ್ದು ಇದೀಗ ಈ ಕುರಿತು ಜೂ.28ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ನೇತೃತ್ವದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ನಾಗರಿಕ ವಿಮಾನಯಾನ ಮಹಾನಿರ್ದೇಶಕರು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷರು, ಬ್ಯೂರೋದ ಮಹಾನಿರ್ದೇಶಕರು ಸೇರಿದಂತೆ ಪ್ರಮುಖ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಪ್ರಯಾಣಿಕರ ಸುರಕ್ಷತೆ ಹಾಗೂ ಅವರ ಅನುಕೂಲಕ್ಕಾಗಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಟರ್ಮಿನಲ್ 2 ಮತ್ತು T3 ವಾರ್ ರೂಮ್, ರದ್ದಾದ ವಿಮಾನಗಳ ಸಂಪೂರ್ಣ ಮರುಪಾವತಿ ಬಗ್ಗೆ ಖಚಿತಪಡಿಸುತ್ತದೆ. ಪರ್ಯಾಯ ಪ್ರಯಾಣ ಮಾರ್ಗದ ಟಿಕೆಟ್‌ಗಳನ್ನು ಒದಗಿಸುವುದನ್ನು ಈ ವಾರ್ ರೂಮ್ಗಳನ್ನು ಸ್ಥಾಪನೆ ಮಾಡಲಾಗಿದೆ. ಮರುಪಾವತಿಗಳನ್ನು 7 ದಿನ ಒಳಗೆ ಮಾಡಬೇಕು ಹಾಗೂ ಈ ಬಗ್ಗೆ ಪ್ರಯಾಣಿಕರಿಗೆ ವೈಯಕ್ತಿವಾಗಿ ತಿಳಿಸಬೇಕು.

ಇಂಡಿಗೋ ವಿಮಾನಯಾನ ಸಂಸ್ಥೆ

T2 ಟರ್ಮಿನಲ್: 7428748308 T3 ಟರ್ಮಿನಲ್: 7428748310

ಸ್ಪೈಸ್‌ಜೆಟ್

T3 ಟರ್ಮಿನಲ್: 0124-4983410/0124-7101600 9 711209864 (ಶ್ರೀ ರೋಹಿತ್)

ಈಗಾಗಲೇ ಟರ್ಮಿನಲ್ 1ರ ಮೇಲ್ಚಾವಣಿ ಕುಸಿದು ಬಿದ್ದ ಕಾರಣ, ಟರ್ಮಿನಲ್ 2 ಮತ್ತು 3ರಲ್ಲಿ ಹೆಚ್ಚುವರಿ ಒತ್ತಡವನ್ನು ನಿಭಾಯಿಸಿ ಅಲ್ಲಿ ಪ್ರಯಾಣಿಕರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡಬೇಕು ಎಂದು ಈ ಸಭೆಯಲ್ಲಿ ಚರ್ಚಿಸಿದ್ದು ಇನ್ನು ಈ ಘಟನೆಯ ಹಿನ್ನೆಲೆ ವಿಮಾನ ದರದಲ್ಲಿ ಹೆಚ್ಚಳ ಮಾಡದಂತೆ ನೋಡಿಕೊಳ್ಳಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಯನ್ನು ನೀಡಲಾಗಿದೆ. ಪ್ರಯಾಣಿಕರ ಕಷ್ಟವಾಗದಂತೆ ಪ್ರಯಾಣ ದರದ ಸ್ಥಿರತೆಯನ್ನು ಕಾಯ್ದುಕೊಳ್ಳಲು ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಇದಲ್ಲದೆ ರಚನಾತ್ಮಕ ಸಾಮರ್ಥ್ಯದ ಸಂಪೂರ್ಣ ತಪಾಸಣೆ ನಡೆಸಲು ಎಲ್ಲ ವಿಮಾನ ನಿಲ್ದಾಣಗಳಿಗೆ ಸುತ್ತೋಲೆ ಹೊರಡಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದು ಈ ತಪಾಸಣೆಗಳನ್ನು ಮುಂದಿನ 2-5 ದಿನಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ವರದಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page