
ದಸರಾ ಸ್ಪೋರ್ಟ್ಸ್ ಮೀಟ್ 2024 ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಟ್ಟದ ಹತ್ತು ಸಾವಿರ ಮೀಟರ್ ರನ್ನಿಂಗ್ ರೇಸ್ ನಲ್ಲಿ ಕಾರ್ಕಳ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಚಿರಾಯು ಕೆ.ಎಲ್ 2 ನೇ ಸ್ಥಾನ ಪಡೆದಿರುತ್ತಾನೆ. ಹಾಗೂ ಐದು ಸಾವಿರ ಮೀಟರ್ ರನ್ನಿಂಗ್ ರೇಸ್ ನಲ್ಲಿ ಭುವನ್ ಎಸ್. ಮಾಲಾಜಿ 3ನೇ ಸ್ಥಾನ ಪಡೆದಿದ್ದು, ಚಿರಾಯು ಕೆ ಎಲ್ ಜಿಲ್ಲಾ ಮಟ್ಟದ ದಸರಾ ಸ್ಪೋರ್ಟ್ಸ್ ಮೀಟ್ 2024-25 ಕ್ಕೆ ಆಯ್ಕೆಯಾಗಿರುತ್ತಾನೆ. ಇವರಿಗೆ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ













