ಯೋಗಾಸನದಲ್ಲಿ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ ತಾಲೂಕು ಮಟ್ಟದ ದಸರಾ ಕ್ರೀಢಾಕೂಟ 2025 ,ಯೋಗಾಸನ ಸ್ಪರ್ಧೆ ತಾಳಬದ್ದ ಯೋಗಾಸದಲ್ಲಿ ಸಿಯಾ ಶೆಟ್ಟಿ ಮತ್ತು ಪ್ರಾಚಿ ಪೈ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಕಲಾತ್ಮಕ ವಯಕ್ತಿಕ ಯೋಗಾಸನ ಸ್ಪರ್ಧೆಯಲ್ಲಿ ಸಿಯಾ ಶೆಟ್ಟಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಹಾಗೂ ಕಲಾತ್ಮಕ ಜೋಡಿಯಲ್ಲಿ ಪ್ರಾಚಿ ಪೈ ಮತ್ತು ಸಿಯಾ ಶೆಟ್ಟಿ ದ್ವಿತೀಯ ಸ್ಥಾನಗಳಿಸಿರುತ್ತಾರೆ.
ಕಾಪು ತಾಲೂಕು ಮಟ್ಟದ ದಸರಾ ಕ್ರೀಢಾಕೂಟ 2025 ,ಯೋಗಾಸನ ಸ್ಪರ್ಧೆ ಕಲಾತ್ಮಕ ವಯಕ್ತಿಕ ಯೋಗಾಸನದಲ್ಲಿ ಗಾನ್ವಿ ಜಿ ಪ್ರಥಮ ,ಕಲಾತ್ಮಕ ಜೋಡಿ ಹಾಗೂ ತಾಳಬದ್ದ ಜೋಡಿ ಯೋಗಾಸನ ಸ್ಪರ್ಧೆಯಲ್ಲಿ ಮಾನ್ವಿ ಜಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಇವರನ್ನು ಶಾಲಾ ಅಧ್ಯಕ್ಷರು ಮತ್ತು ಸದಸ್ಯರು , ಮುಖ್ಯೋಪಾದ್ಯಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.



















