
ಮಣಿಪಾಲ: ಮಾರ್ಚ್ 12ರಂದು ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಗರುಡ ಗ್ಯಾಂಗಿನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಅವರಿಂದ ಕಾಲಿಗೆ ಗುಂಡೇಟು ತಿಂದಿದ್ದು ಇದೀಗ ನ್ಯಾಯಾಲಯವು ಏಪ್ರಿಲ್ 1ರವರಿಗೆ ಒಟ್ಟು 9 ದಿನಗಳ ಕಾಲ ಇಸಾಕ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಬೆಂಗಳೂರಿನ ನೆಲಮಂಗಲ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಸಾರ್ವಜನಿಕರ ಕಾರು ಬೈಕಿಗೆ ಗುದ್ದಿದ ಪ್ರಕರಣದಲ್ಲಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಿ ಮಣಿಪಾಲಕ್ಕೆ ಕರೆತರುತ್ತಿರುವ ವೇಳೆ ವಾಂತಿ ಬರುತ್ತದೆ ಎಂದು ನಾಟಕವಾಡಿ ಕಾರನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದನು. ಕಾರು ನಿಂತ ಬಳಿಕ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಯಾಗಲು ಯತ್ನಿಸಿದಾಗ ಮಣಿಪಾಲ ಪಿಎಸ್ಐ ದೇವರಾಜ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದರು. ಬಳಿಕ ಆರೋಪಿಯನ್ನು ಮಣಿಪಾಲದ ಕೆಎಂಸಿ ಹಾಸ್ಪಿಟಲ್ ನಲ್ಲಿ ದಾಖಲಿಸಿದ್ದು ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆರೋಪಿಯು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.